ಮೈಸೂರು

ಸಮುದಾಯದ ಶ್ರೇಯೋಭಿವೃದ್ಧಿಗಾಗಿ ನಿರ್ಣಯ ಕೈಗೊಳ್ಳಲಾಗುವುದು: ಡಾ. ಭಾನುಪ್ರಕಾಶ್ ಶರ್ಮ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ  ಡಿಸೆಂಬರ್ 11 ಮತ್ತು 12ರಂದು ಎರಡು ದಿನಗಳ ಕಾಲ ಬೆಳಗಾಂನಲ್ಲಿರುವ  ಗಾಯತ್ರಿ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ 9ನೇಬ್ರಾಹ್ಮಣ ಮಹಾಸಮ್ಮೇಳನದಲ್ಲಿ ಭಾಗವಹಿಸಲು ಶನಿವಾರ ಮೈಸೂರು ಜಿಲ್ಲಾ ನಗರ ಬ್ರಾಹ್ಮಣ ಸಂಘದ ಪ್ರಮುಖರು ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ನಗರದ ರೈಲ್ವೇ ನಿಲ್ದಾಣ ದ ಬಳಿ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ ನಮ್ಮ ಬ್ರಾಹ್ಮಣ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಿದೆ ಹಾಗಾಗಿ ಭವಿಷ್ಯದ ಪರಿಕಲ್ಪನೆಯಿಂದ ರಾಜ್ಯಮಟ್ಟದ ಬ್ರಾಹ್ಮಣ ಮಹಾಸಮ್ಮೇಳನ  ಸಜ್ಜಾಗಿದೆ. ಮೈಸೂರು ಜಿಲ್ಲೆಯಿಂದ ನೊರಾರು ವಿಪ್ರಭಾಂದವರು ಭಾಗವಹಿಸುತ್ತಿದ್ದಾರೆ, ಅವರುಗಳಿಗೆ ಸಾರಿಗೆ ವಸತಿ ಮತ್ತು ಊಟ,ವಸತಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ, ಸಮಾವೇಶದ ಮೂಲಕ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಲವಾರು ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುವುದು ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾ ನಗರ ಬ್ರಾಹ್ಮಣ ಸಂಘದ ವತಿಯಿಂದ ಬ್ರಾಹ್ಮಣ ರಿಗೆ ಪ್ರತಿಭಾಪುರಸ್ಕಾರ, ಆರೋಗ್ಯವಿಮೆ, ಉದ್ಯೋಗಮೇಳ ನಡೆಸಲಾಗುವುದು ಎಂದು ಹೇಳಿದರು.  ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಟಿ.ಡಿ.ಪ್ರಕಾಶ್ ಮಾತನಾಡಿ ಜಿಲ್ಲೆಯಿಂದ ಮನೆಗೊಬ್ಬರಂತೆ ಬ್ರಾಹ್ಮಣರು ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು  ಬ್ರಾಹ್ಮಣರ ನಡೆ ಬೆಳಗಾವಿ ಕಡೆ ಎಂದು ಕರೆ ನೀಡಿದರು, ಶಿಕ್ಷಣ ಆರೋಗ್ಯ ಉದ್ಯೋಗದ ಕ್ಷೇತ್ರದಲ್ಲಿ ನಮ್ಮ ಬ್ರಾಹ್ಮಣ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರಿ ಸವಲತ್ತುಗಳ ಅವಶ್ಯಕತೆಯಿದೆ, ಹಾಗಾಗಿ ನಮ್ಮ ಸಮಾಜದ  ಹಕ್ಕುಪ್ರದರ್ಶನಕ್ಕಾಗಿ ಬ್ರಾಹ್ಮಣರು ಸಂಘಟಿತರಾಗಿ ಹೊರಹೊಮ್ಮಿದರೆ ಮುಂದಿನ ನಮ್ಮ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಉಪಯೋಗವಾಗಲಿದೆ  ಎಂದು ತಿಳಿಸಿದರು. ವಿಪ್ರರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ನಮ್ಮ ಸಮಾಜದ ಶಕ್ತಿ ಮತ್ತು ಸಂಘಟನೆ ಪ್ರದರ್ಶನವಾಗಬೇಕು ಎಂದರು.

ಬ್ರಾಹ್ಮಣ ಮುಖಂಡರಾದ ಶ್ರಿಕಂಠ್ ಕುಮಾರ್, ಬಾಲಕೃಷ್ಣ, ಮಂಜುನಾಥ್,  ಸೌಭಾಗ್ಯಮೂರ್ತಿ,   ಪ್ರಹಲ್ಲಾದ್,   ಬ್ರಾಹ್ಮಣ ಯುವವೇದಿಕೆಯ  ವಿಕ್ರಂ ಅಯ್ಯಂಗಾರ್, ಜೋಗಿ ಮಂಜು, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್,  ರಂಗನಾಥ್, ಶ್ರೀಕಾಂತ್ ಕಶ್ಯಪ್,  , ಬಾಬು ಸೇರದಂತೆ 170 ಮಂದಿ ಬೆಳಗಾವಿಯತ್ತ ಪ್ರಯಾಣ ಬೆಳಸಿದ್ದಾರೆ.

Leave a Reply

comments

Related Articles

error: