ಮೈಸೂರು

ವಿವಾದಿತ ವ್ಯಕ್ತಿಗೆ ಮನ್ನಣೆ : ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಮತ್ತೆ ಡಾ. ಆರ್.ರಾಜಣ್ಣ ನೇಮಕ

ಮೈಸೂರು,ಜೂ.14:- ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಮತ್ತೆ ಡಾ. ಆರ್.ರಾಜಣ್ಣ ನೇಮಕಗೊಂಡಿದ್ದಾರೆ.

ವಿಶ್ವವಿದ್ಯಾನಿಲಯದ  ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿಯಲ್ಲಿ ರಾಜಣ್ಣ ಅವರ ಹೆಸರು ಥಳಕು ಹಾಕಿಕೊಂಡಿತ್ತು. ಇದೀಗ ಡಾ.ಆರ್. ರಾಜಣ್ಣ  ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವೀರಭ್ರಹ್ಮಚಾರಿ ಆದೇಶ ಹೊರಡಿಸಿದ್ದು, ಮೈಸೂರು ವಿವಿ ಮೊದಲ ಕುಲಸಚಿವೆಯಾಗಿದ್ದ  ಡಿ. ಭಾರತಿ ಮಾತೃ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ವಿವಿ ಅಕ್ರಮ ನೇಮಕಾತಿಯಲ್ಲಿ ರಾಜಣ್ಣ ಸುದ್ದಿಯಾಗಿದ್ದರು. ರಾಜಣ್ಣ ಆಡಳಿತಾವಧಿಯಲ್ಲಿ ಸಿಬ್ಬಂದಿಗಳ ಅಕ್ರಮ ನೇಮಕಾತಿ ಸಂಬಂಧ ರಾಜ್ಯಪಾಲರು  ತನಿಖೆಗೆ ಆದೇಶ ನೀಡಿದ್ದರು.ರಾಜಣ್ಣ ವರ್ಗಾವಣೆ ಮಾಡುವಂತೆ ವಿದ್ಯಾರ್ಥಿ ಸಂಘಟನೆಯಿಂದಲೂ ಪ್ರತಿಭಟನೆ ನಡೆದಿತ್ತು. ವಿವಾದದ ಬಳಿಕ ರಾಜಣ್ಣ ವರ್ಗಾವಣೆಯಾಗಿದ್ದರು. ಇದೀಗ ವಿವಾದಿತ ವ್ಯಕ್ತಿಗೆ ಸರ್ಕಾರ ಮತ್ತೆ ಮನ್ನಣೆ ನೀಡಿದೆ ಎಂಬ ಮಾತು ಕೇಳಿ ಬರುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: