ಸುದ್ದಿ ಸಂಕ್ಷಿಪ್ತ

ಬಿ.ಗೌಡಗೆರೆಯಿಂದ ಕಾಣೆಯಾದವರ ಪತ್ತೆಗೆ ಮನವಿ

ಮಂಡ್ಯ (ಜೂನ್ 14): ಮಂಡ್ಯ ತಾಲ್ಲೂಕು ಬಿ.ಗೌಡಗೆರೆ ಗ್ರಾಮ ನಿವಾಸಿ 35 ವರ್ಷದ ಕಾಂಚನ ಎಂಬುವವರು ಕಾಣೆಯಾಗಿದ್ದಾರೆ ಎಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂಚನ ಅವರು 5.4 ಅಡಿ ಎತ್ತರ, ಸಾಧಾರಣ ಶರೀರ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

ಹೆಗ್ಗಡತಹಳ್ಳಿ ಗ್ರಾಮ ನಿವಾಸಿ ಭಾಗ್ಯಮ್ಮ ಕಾಣೆ :

ಮಂಡ್ಯ ತಾಲ್ಲೂಕು ಹೆಗ್ಗಡತಹಳ್ಳಿ ಗ್ರಾಮ ನಿವಾಸಿ ಭಾಗ್ಯಮ್ಮ ಎಂಬುವವರು ಕಾಣೆಯಾಗಿದ್ದಾರೆ ಎಂದು ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾಗ್ಯಮ್ಮ ಅವರು 5.5 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಬಸರಾಳು ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: