ಮೈಸೂರು

ವಿಶ್ವ ರಕ್ತದಾನಿಗಳ ದಿನ ಪ್ರಯುಕ್ತ ಯಂಗ್ ಇಂಡಿಯನ್ಸ್ ಅವರಿಂದ ರಕ್ತದಾನ

ಮೈಸೂರು,ಜೂ.14:-  ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ -ಯಂಗ್ ಇಂಡಿಯನ್ಸ್(ಸಿಐಐ-ವೈ) ವತಿಯಿಂದ  ವಿಶ್ವ ರಕ್ತದಾನಿಗಳ ದಿನ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮಕ್ಕೆ ರಕ್ತದಾನದ ಮೂಲಕ ಚಾಲನೆ ನೀಡಲಾಯಿತು.

ಕಾಳಿದಾಸ ರಸ್ತೆಯಲ್ಲಿರುವ ಚಂದ್ರಕಲಾ ಆಸ್ಪತ್ರೆಯಲ್ಲಿ ರೋಟರಿ ಮೈಸೂರು ಮತ್ತು ಚಂದ್ರಕಲಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಗುರುವಾರ ನಗರದಲ್ಲಿ ನಡೆದ ಕಾರ್ಯಕ್ರಮವನ್ನು ಸಿಐಐ ಉಪಾಧ್ಯಕ್ಷರಾದ ಭಾಸ್ಕರ್ ಕಳಲೆ ಉದ್ಘಾಟಿಸಿದರು. ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್ , ರೋಟರಿ ಮೈಸೂರು ಇದರ ಅಧ್ಯಕ್ಷ ಮತ್ತು ಕಾರ್ಯದರ್ಶಿ, ಯಂಗ ಇಂಡಿಯನ್ಸ್  ಅಧ್ಯಕ್ಷ ರವಿಶಂಕರ್, ಘನಶ್ಯಾಂ ಮುರಳಿ, ಸಂಸ್ಥಾಪಕ ಉತ್ಸವ್ ಅಗರವಾಲ್,ಕವೀಶ್ ಗೌಡ,  ರಮ್ ಬೋಪಣ್ಣ, ಡಾ.ಚೈತ್ರಾ ನಾರಾಯಣ್, ಭರತ್ ಗೌಡ, ಶ್ರದ್ಧಾ ಪಾಠಕ್, ಸ್ಮಿತಾ ಹಲವು ರಕ್ತದಾನಿಗಳು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಯಂಗ್ ಇಂಡಿಯನ್ಸ್ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ದೇಶದ 19 ಕಡೆಗಳಲ್ಲಿ ಯಂಗ್ ಇಂಡಿಯನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Leave a Reply

comments

Related Articles

error: