ಕರ್ನಾಟಕ

ನಾನು ಗೌಡರ ಕುಟುಂಬ ಸದಸ್ಯನಲ್ಲ, ಕಾಂಗ್ರೆಸ್-ಬಿಜೆಪಿಯಲ್ಲೂ ಇದ್ದೆ: ಡಿ.ಸಿ.ತಮ್ಮಣ್ಣ

ಬೆಂಗಳೂರು (ಜೂನ್ 14): ನಾನು ದೇವೇಗೌಡರ ಕುಟುಂಬಕ್ಕೆ ಸೇರಿದವನಲ್ಲ. ನನ್ನ ಮಗಳನ್ನು ಅವರ ಮನೆಗೆ ಕೊಟ್ಟಿದ್ದೇನೆ. ನಾನು ದೇವೇಗೌಡರ ಸಂಬಂಧಿಕನೇ ಹೊರತು ಕುಟುಂಬ ಸದಸ್ಯನಲ್ಲ. ಹೀಗಾಗಿ ನನಗೆ ದೊರೆತ ಸಚಿವ ಸ್ಥಾನ ನನ್ನ ಅರ್ಹತೆಗೆ ದೊರೆತಿರುವ ಹಕ್ಕು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ದೇವೇಗೌಡರ ಕುಟುಂಬದವನು ಎಂಬ ಕಾರಣಕ್ಕೆ ಸಚಿವ ಸ್ಥಾನ ದೊರೆತಿದೆ ಎನ್ನುವುದು ತಪ್ಪು. ಅವರ ಕುಟುಂಬವೇ ಬೇರೆ. ನಮ್ಮ ಕುಟುಂಬವೇ ಬೇರೆ. ಸಚಿವ ಸ್ಥಾನ ನನ್ನ ಯೋಗ್ಯತೆ ಹಾಗೂ ಅರ್ಹತೆಗಾಗಿ ದೊರೆತಿದೆ. ನಾನು ಇದಕ್ಕೂ ಮೊದಲು 1999ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದೆ, ಬಿಜೆಪಿಯಲ್ಲಿಯೂ ಇದ್ದೆ, ಹೀಗಾಗಿ ಅನಗತ್ಯ ದೂಷಣೆ ತಪ್ಪು” ಎಂದರು.

ಜೆಡಿಎಸ್‌ ಪಕ್ಷದಲ್ಲಿರುವವರೆಲ್ಲರೂ ಒಂದು ಕುಟುಂಬದಂತೆ ಇದ್ದೇವೆ. ಮಂಡ್ಯ ಜಿಲ್ಲೆಯ ಜೆಡಿಎಸ್‌ನಲ್ಲಿ ಯಾವುದೇ ವಿವಾದ ಇಲ್ಲ. ಪುಟ್ಟರಾಜು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾಯಕತ್ವದ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದಷ್ಟೇ ಹೇಳಿದರು. (ಎನ್.ಬಿ)

Leave a Reply

comments

Related Articles

error: