ಮೈಸೂರು

ಸಮಾಜದಲ್ಲಿ ಅಭಿವೃದ್ಧಿಯ ಕಾರ್ಯವಾಗಬೇಕು: ಚೇತನ್

ಯಾವುದೇ ಪಕ್ಷಗಳ ಅಧಿಕಾರ ದಾಹಕ್ಕಿಂತ ಸಮಾಜದಲ್ಲಿ ಅಭಿವೃದ್ಧಿಯ ಹಾಗೂ ಬದಲಾವಣೆಯ ಕಾರ್ಯವಾಗಬೇಕು ಎಂದು ಚಲನಚಿತ್ರ ನಟ ಚೇತನ್ ತಿಳಿಸಿದರು.

ಮೈಸೂರಿನ ಅಶೋಕಪುರಂನಲ್ಲಿರುವ ಬಹುಜನ ವಿದ್ಯಾರ್ಥಿಸಂಘದ ವತಿಯಿಂದ ಅಂಬೇಡ್ಕರ್ ಅವರ 60ನೇ ವರ್ಷದ ಪರಿನಿರ್ವಾಣದ ಅಂಗವಾಗಿ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವವನ್ನು ಉಳಿಸೋಣ ವಿಚಾರ ಸಂಕಿರಣವನ್ನು ಚೇತನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರಸ್ತುತ ಸಮಾಜಕ್ಕೆ ಬುದ್ಧ, ಬಸವ, ಅಂಬೇಡ್ಕರ್ ರ ಮಾರ್ಗ ಅಗತ್ಯವಾಗಿದೆ. ಸಮಾನತೆಯ ಸಮಾಜ ಕಟ್ಟಲು ತಳಮಟ್ಟದಲ್ಲಿರುವ ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಅಭಿವೃದ್ಧಿ ತುಂಬಾ ಮುಖ್ಯ ಎಂದರು.

ಭಾರತ ವೈವಿಧ್ಯಮಯ ದೇಶವಾಗಿದ್ದು, ಇಲ್ಲಿ ಅನೇಕ ಭಾಷೆಯ, ಬಣ್ಣದ, ಧರ್ಮದ ಜನರಿದ್ದರೂ ಬೇರೆ ದೇಶಗಳಂತೆ ಬಿರುಕು ಉಂಟಾಗಿಲ್ಲ ಇದಕ್ಕೆ ಕಾರಣ ಸಂವಿಧಾನ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿವಿಎಸ್ ಹೊರತಂದಿರುವ 2017ರ ವಾರ್ಷಿಕ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಮಹಾರಾಜ ಕಾಲೇಜು ಸಹಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಮಾಜಿ ಮಹಾಪೌರ ಪುರುಷೋತ್ತಮ, ಅಶೋಕಪುರಂ ಮುಖಂಡ ವಿ.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: