
ಮೈಸೂರು
ನಾಗೇಂದ್ರಕುಮಾರ್ ದಂಪತಿಗೆ ಅಭಿನಂದನೆ
ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ನಾಗೇಂದ್ರಕುಮಾರ್ ಸ್ನೇಹ ಬಳಗದ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾದ ನಾಗೇಂದ್ರಕುಮಾರ್ ಮತ್ತವರ ಪತ್ನಿ ಮೀನಾಕ್ಷಿ ಅವರನ್ನು ಸ್ನೇಹ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಜಂಟಿ ನಿರ್ದೇಶಕ ಎ.ಎಸ್.ರಾಮಪ್ಪ ಮಾತನಾಡಿ ನಾಗೇಂದ್ರಕುಮಾರ್ ತಮ್ಮ ಸೇವಾವಧಿಯಲ್ಲಿ ಟೀಕೆ, ಒತ್ತಡಗಳಿಗೆ ಅಂಜದೆ ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಶಿಕ್ಷಣಶಾಸ್ತ್ರ ಅಧ್ಯಯನ ಮಂಡಳಿಯ ಮುಖ್ಯಸ್ಥೆ ಪ್ರೊ.ಸರ್ವಮಂಗಳ, ಶಿಕ್ಷಣ ಇಲಾಖಾಧಿಕಾರಿಗಳಾದ ಮರೀಸ್ವಾಮಿ, ಕರೀಗೌಡ, ಶಿವರಾಮ ಮತ್ತಿತರರು ಉಪಸ್ಥಿತರಿದ್ದರು.