ಪ್ರಮುಖ ಸುದ್ದಿ

ಶ್ರದ್ಧಾ ಭಕ್ತಿಯಿಂದ ರಂಜಾನ್ ಹಬ್ಬ ಆಚರಣೆ : ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

ರಾಜ್ಯ(ಮಂಗಳೂರು)ಜೂ.15:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು  ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ  ರಂಜಾನ್ ಹಬ್ಬವನ್ನು ಆಚರಿಸಿದರು.

ಬಂಟ್ವಾಳ, ಪುತ್ತೂರಿನ ವಿವಿಧ ಮಸೀದಿಗಳಲ್ಲಿ,ಸುಳ್ಯ, ಮೂಡಬಿದ್ರೆಯ ವಿವಿಧ ಮಸೀದಿಗಳಲ್ಲಿ, ಮಂಗಳೂರಿನ ವಿವಿಧ ಮಸೀದಿಗಳಲ್ಲಿ, ಬಾವುಟಗುಡ್ಡೆಯ ಮಸೀದಿಯಲ್ಲಿ, ಪಂಪ್ ವೆಲ್ ಮಸೀದಿ, ಉಳ್ಳಾಲ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆದಿದೆ. ಉಡುಪಿ ಜಿಲ್ಲೆಯಲ್ಲೂ ಇಂದೇ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ ನಾಳೆ ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತಿದೆ. ಒಂದು ತಿಂಗಳ ಉಪವಾಸದ ಬಳಿಕ ರಂಝಾನ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಸುರಕ್ಷತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ರಂಜಾನ್ ಪ್ರಯುಕ್ತ ಸಚಿವ ಯು.ಟಿ.ಖಾದರ್ ಅವರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: