ಕರ್ನಾಟಕ

ಮನೆಯಲ್ಲಿ ಬಲ್ಪ್ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರ ಸಾವು

ರಾಜ್ಯ(ಚಾಮರಾಜನಗರ)ಜೂ.15:-   ಮನೆಯಲ್ಲಿ ಬಲ್ಪ್ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಸವರಾಜ್(55), ಶ್ರೀನಿವಾಸ (43) ಎಂದು ಗುರುತಿಸಲಾಗಿದ್ದು, ಬಸವರಾಜ್ ಮನೆಯಲ್ಲಿ ಅವಘಡ ಸಂಭವಿಸಿದೆ. ಬಸವರಾಜ್ ನ್ನು  ರಕ್ಷಿಸಲು ಹೋದ ನೆರೆಮನೆಯ ಶ್ರೀನಿವಾಸ ಕೂಡ ಸಾವನ್ನಪ್ಪಿದ್ದಾರೆ. ಶ್ರೀನಿವಾಸ ಸಹೋದರ ಕಾಮರಾಜ್ ಅಣ್ಣನನ್ನು ಬಿಡಿಸಲು ಹೋಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗ್ಗೆಯಿಂದ ಮಳೆ ಬೀಳುತ್ತಿರುವುದರಿಂದ ಶಾರ್ಟ್ ಸರ್ಕೀಟ್ ಆಗಿರುವ ಸಾಧ್ಯತೆ ಇದ್ದು ಈ ರೀತಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: