ಮೈಸೂರು

ಉಪನ್ಯಾಸಕರ ಅರ್ಹತಾ ಪರೀಕ್ಷೆ ಬರೆದ ಅಂಧ ವಿದ್ಯಾರ್ಥಿ

blindಮೈಸೂರಿನ 21 ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಭಾನುವಾರ ನಡೆದಿದೆ. ಮೈಸೂರು ನೋಡಲ್ ಕೇಂದ್ರದಲ್ಲಿ 15 ಸಾವಿರಕ್ಕೂ ಅಧಿಕ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ನೋಡಲ್ ಕೇಂದ್ರದಲ್ಲಿ ವಾಣಿಜ್ಯ ವಿಷಯದಲ್ಲಿ ಅತಿಹೆಚ್ಚು 1779 ಅಭ್ಯರ್ಥಿಗಳು ಹಾಗೂ ಮರಾಠಿಗೆ ಅತಿ ಕಡಿಮೆ ಅಂದರೆ ಒಬ್ಬರು ಪರೀಕ್ಷಾರ್ಥಿ ಇದ್ದಾರೆ. 21 ಮುಖ್ಯ ಅಧೀಕ್ಷಕರು, 26 ಸಹಾಯಕ ಅಧೀಕ್ಷಕರು, 556 ಕೊಠಡಿ ಮೇಲ್ವಿಚಾರಕರು 108 ಪರಿಚಾರಕರನ್ನು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿದೆ.

ಒಂದು ಕೊಠಡಿಯಲ್ಲಿ 24 ರಿಂದ 28 ಅಭ್ಯರ್ಥಿಗಳಿಗೆ ಆಸನ ಕಲ್ಪಿಸಲಾಗಿದೆ. ಪರೀಕ್ಷಾ ನಿಟ್ಟಿನಲ್ಲಿ ಎಲ್ಲ ಸೂಕ್ತ ಬಂದೋಬಸ್ತ್ ಗಳನ್ನು ಏರ್ಪಡಿಸಲಾಗಿದೆ. ಪರೀಕ್ಷಾ ಕಾರ್ಯ ಪರಿಶೀಲನೆಗೆ ಮೂರು ಸಂಚಾರ ವಿಚಕ್ಷಣಾ ದಳಗಳನ್ನು ನೇಮಿಸಲಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹುಬ್ಬಳ್ಳಿ, ಧಾರವಾಡ ಸೇರದಂತೆ ವಿವಿಧೆಡೆಗಳಿಂದ ಆಗಮಿಸಿದ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬೆಳಿಗ್ಗೆ ಒಂದು ಮಧ್ಯಾಹ್ನ ಎರಡು ಪೇಪರ್ ಗಳಿಗೆ ಉತ್ತರ ಬರೆಯಬೇಕಿದೆ. ಪರೀಕ್ಷಾರ್ಥಿಗಳು ಕೇವಲ ಗುರುತಿನ ಪತ್ರ ಮತ್ತು ಪರೀಕ್ಷೆಯ ಅಡ್ಮಿಶನ್ ಟಿಕೇಟ್ ಗಳನ್ನು ಮಾತ್ರ ತಮ್ಮ ಜೊತೆ ಕೊಂಡೊಯ್ಯಬೇಕು.

ಎಸ್.ಡಿ.ಎಂ. ಕಾಲೇಜಲ್ಲಿ ಅಂಧ ವಿದ್ಯಾರ್ಥಿಯೋರ್ವರು ಪರೀಕ್ಷೆ ಬರೆಯುತ್ತಿದ್ದು, ಸಾಧನೆಗೆ ಛಲವೊಂದಿದ್ದರೆ ಸಾಕು ಎಂಬುದನ್ನು ಸಾಬೀತು ಪಡಿಸಿದ್ದಾರೆ.

Leave a Reply

comments

Related Articles

error: