
ಮೈಸೂರು
ಸೈಕಲ್ ಓಡಿಸಿ ಮಾಲಿನ್ಯ ತಡೆಯಿರಿ
ಮೈಸೂರಿನ ಸೈಕ್ಲಿಂಗ್ ಕ್ಲಬ್ ಸೈಕಲ್ ಕುರಿತು ಜನರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಭಾನುವಾರ ಸೈಕಲ್ ರ್ಯಾಲಿಯನ್ನು ಆಯೋಜಿಸಿತ್ತು.
ಮೈಸೂರಿನ ಲಲಿತ್ ಮಹಲ್ ಬಳಿಯ ಹೆಲಿಪ್ಯಾಡ್ ನಲ್ಲಿ ಸೈಕಲ್ ರ್ಯಾಲಿಗೆ ಚಾಲನೆ ನೀಡಲಾಯಿತು. ರ್ಯಾಲಿಗೆ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ರವಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸೈಕಲ್ ಕುರಿತು ಜಾಗೃತಿ ಮೂಡಿಸಲು ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸೈಕಲ್ ಓಡಿಸುವುದರಿಂದ ದೇಹಕ್ಕೆ ವ್ಯಾಯಾಮ ದೊರಕಲಿದೆ. ನಿಮಗೆ ತುರ್ತು ಅಗತ್ಯವಿದ್ದಾಗ ಮಾತ್ರ ಕಾರು, ಬೈಕ್ ಗಳನ್ನು ಬಳಸಿ. ಆದರೆ ಸೈಕಲ್ ಬಳಕೆಯನ್ನು ಹೆಚ್ಚು ಮಾಡಿ. ಇದರಿಂದ ಪರಿಸರ ಮಾಲಿನ್ಯವಾಗುವುದನ್ನು ತಡೆಯಬಹುದು ಎಂದು ಹೇಳಿದರು.
ರ್ಯಾಲಿಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.