ಕರ್ನಾಟಕ

ವರದಕ್ಷಿಣೆ ಕಿರುಕುಳ : ನವವಿವಾಹಿತೆ ಆತ್ಮಹತ್ಯೆ

ರಾಯಚೂರು,ಜೂ.15: ಮದುವೆಯಾದ ಮೂರೇ ತಿಂಗಳಿಗೆ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ರಾಯಚೂರು ತಾಲೂಕಿನ ದೇವಸಗೂರಿನಲ್ಲಿ ನಡೆದಿದೆ.

ಸವಿತಾ(23) ನೇಣಿಗೆ ಶರಣಾದ ಗೃಹಿಣಿ. ಸವಿತಾ ಕಳೆದ ಮಾರ್ಚ್ 31ರಲ್ಲಿ ಬಾಲರಾಜ್ ಎಂಬುವವರ ಜೊತೆ ಮದುವೆ  ನಡೆದಿತ್ತು, ಮದುವೆಯಾದ ಮೂರು ತಿಂಗಳೊಳಗೆ ನವ ವಿವಾಹಿತೆ ನೇಣಿಗೆ ಶರಣಾಗಿದ್ದಾಳೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸವಿತಾ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆದರೆ  ಪೋಷಕರು ವರದಕ್ಷಿಣೆಗಾಗಿ ಗಂಡನ ಮನೆಯವರು ಸವಿತಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕೊಲೆ ಮಾಡಿ ನೇಣು ಹಾಕಿರುವುದಾಗಿ ಸವಿತಾ ಕುಟುಂಬದವರು ದೂರು ನೀಡಿದ್ದಾರೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ( ಪಿ.ಎಸ್ )

Leave a Reply

comments

Related Articles

error: