ಮೈಸೂರುಲೈಫ್ & ಸ್ಟೈಲ್

ನಶಿಸುತ್ತಿರುವ ದೇಶಿ ಆಟಗಳ ಉತ್ತೇಜನ : ಜೂ.17ರಂದು ಪತ್ರಕರ್ತರ ಕುಟುಂಬದವರಿಗಾಗಿ ದೇಶಿ ಆಟಗಳು

ಕಲಾತ್ಮಕ ದೇಶಿ ಆಟಗಳು ಕೇವಲ ದೇಹಕ್ಕಷ್ಟೇ ಅಲ್ಲ, ಮಾನಸಿಕ ಹಾಗೂ ತಾತ್ವಿಕ ಚಿಂತನೆ ಹಚ್ಚುವ ಶಕ್ತಿ ಸಾಮರ್ಥ್ಯ ಹೊಂದಿರು ಸುಲಭ ಹಾಗೂ ಖರ್ಚಿಲ್ಲದ ಸರಳ ಆಟಗಳಾಗಿವೆ. ಆದರೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯಾಂತ್ರಿಕ ಯುಗದಲ್ಲಿ ದೈಹಿಕ ಕಸರತ್ತಿಗೆ ನೀಡುವಷ್ಟು ಪ್ರಾಮುಖ್ಯತೆ ದೇಶಿ ಕ್ರೀಡೆಗಳಿಗೆ ನೀಡುತ್ತಿಲ್ಲವೆಂಬುದೆ ಖೇಧಕರ ಎನ್ನುವರು ಮನ್ವಂತರ ಸಮೂಹ ಸಂಸ್ಥೆಯ ವೆಂಕಟರಾಮ್ ಕಶ್ಯಪ್.

ಸಿಟಿ ಟುಡೆ’ಯೊಂದಿಗೆ ಮಾತನಾಡಿದ ಅವರು, ಇಂದು ಪಾಶ್ಚಾತ್ಯ ಶಿಕ್ಷಣದ ಸಂಪರ್ಕದಿಂದಲೋ, ವೈಜ್ಞಾನಿಕತೆಯ ಪ್ರಭಾವದಿಂದಲೋ, ಪಟ್ಟಣಗಳಲ್ಲಿ ಸುಶಿಕ್ಷಿತ ಮಕ್ಕಳು, ಯುವಕರು ಪಾಶ್ಚಾತ್ಯ ಆಟಗಳಿಗೆ ಮೊರೆ ಹೋಗುತ್ತಾರೆ. ಈ ಪಾಶ್ಚತ್ಯ ಕ್ರೀಡೆಗಳು ಕೇವಲ ದೈಹಿಕ ಕಸರತ್ತಿಗಷ್ಟೇ ಸಿಮೀತವಾಗಿದ್ದು ಮನರಂಜನೆ ದೊರೆಯುವುದಿಲ್ಲ. ಈ ಸೋಂಕು ಹಳ್ಳಿಯ ಯುವಕರನ್ನು  ಬಿಟ್ಟಿಲ್ಲ ಅಲ್ಲಿಯೂ ದೇಶಿ ಆಟಗಳು ಕಡೆಗಣಿಸಲಾಗುತ್ತಿದೆ ಎನ್ನುವುದು ದುಃಖಕರವೆಂದರು.
ನಮ್ಮ ಸಂಪ್ರದಾಯ ಆಟಗಳು ಹೆಚ್ಚು ಜನಪ್ರಿಯವಾಗಬೇಕು. ಶಾಲಾ ಕಾಲೇಜುಗಳು ಜನಪದ ಆಟಗಳನ್ನು ಆಡಿಸಬೇಕು. ನಾಡ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಹಿರಿಮೆಯನ್ನು ಪ್ರಪಂಚಕ್ಕೆ ತೋರಿಸಬೇಕು. ಹೀಗಾದಲ್ಲಿ ನಮ್ಮ ದೇಶಿ, ಜನಪದ ಆಟಗಳು ಪ್ರಪಂಚಕ್ಕೆ ಭಾರತದ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ ಎನ್ನುವರು.

ಆದ್ದರಿಂದ ದೇಶಿ ಕ್ರೀಡೆ ಜಾಗೃತಿ ಮತ್ತು ಉತ್ತೇಜನಕ್ಕಾಗಿ ಕಳೆದ ಹದಿನೈದು ವರ್ಷಗಳಿಂದ ಸಂಸ್ಥೆ ವತಿಯಿಂದ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ, ಈಗಾಗಲೇ ನಾಡ ಹಬ್ಬ ಮೈಸೂರಿನ ದಸರಾ ಉತ್ಸವದಲ್ಲಿ, ಲಯನ್ಸ್ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ರಾಜಧಾನಿ ಬೆಂಗಳೂರು, ಚಾಮರಾಜನಗರ, ಭದ್ರಾವತಿಗಳಲ್ಲಿ ನಡೆಸಿದ ದೇಶಿ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ವಯೋಮಾನದ ಮಿತಿಯಿಲ್ಲದೇ ಪ್ರತಿಯೊಬ್ಬರನ್ನು ಸೆಳೆಯುವಂತಹ ಶಕ್ತಿ ಈ ಕ್ರೀಡೆಗಳಿಗೆ ಎನ್ನುವರು.

ಈ ನಿಟ್ಟಿನಲ್ಲಿ ಜೂ.17ರಂದು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಪುಟ್ಬಾಲ್ ಮೈದಾನದಲ್ಲಿ, ಮೈಸೂರು ಜಿಲ್ಲಾ ಪತ್ರಕರ್ತರ ಹಮ್ಮಿಕೊಂಡಿರುವ ವಾರ್ಷಿಕ ಕ್ರೀಡಾಕೂಟದಲ್ಲಿ ವಿಶೇಷವಾಗಿ ಪತ್ರಕರ್ತರ ಕುಟುಂಬಕ್ಕಾಗಿ ದೇಶಿ ಕ್ರೀಡೆಗಳಾದ ಕಪ್ಪೆ ಓಟ, ಒಂಟಿಕಾಲಿನ ಓಟ, ಮೂರು ಕಾಲಿನ ಓಟ, ಹಗ್ಗದ ಓಟ, ಕಂಬದ ಆಟ, ಚೌಕಾಬಾರ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು.

ಸಾಮರಸ್ಯ ದಾಂಪತ್ಯ ಜೀವನದ ತಳಹದಿಯಲ್ಲಿ ನಡೆಸುವ ಮೂರು ಕಾಲಿನ ಓಟ, ಕುಟುಂಬ ನಿರ್ವಹಣೆ ತಿಳಿಸಲಿದೆ. ಜೀವನದ ಸಮತೋಲನಕ್ಕೆ ಹಗ್ಗದ ಓಟ, 360 ಡಿಗ್ರಿಯವರೆಗೂ ಬುದ್ದಿಯನ್ನು ತೀಕ್ಷಣಗೊಳಿಸಲು ಕಂಬದ ಆಟ, ವರ್ಷದ ಭವಿಷ್ಯ ತಿಳಿಯಲು ಚೌಕಾಬಾರ ಆಟವನ್ನು ನಡೆಸಲಾಗುವುದು ಎಂದರು. (ಕೆ.ಎಂ.ಆರ್)

Leave a Reply

comments

Related Articles

error: