ಮೈಸೂರು

ಕ್ಯಾರಲ್ ಗಾಯನದ ಮೂಲಕ ಹೊಸ ಲೋಕ ಸೃಷ್ಟಿ

crismas-1ಕ್ರಿಸ್ಮಸ್ ಭಾರತೀಯ ಕ್ರೈಸ್ತರಿಗೆ ವರ್ಷದಲ್ಲಿ ಬರುವ ಒಂದೇ ಒಂದು ಅತ್ಯಂತ ಸಡಗರ ಸಂಭ್ರಮದ ಹಬ್ಬ. ಶಾಂತಿ, ಪ್ರೀತಿ, ಕರುಣೆ, ಸಮಾಧಾನ, ಏಕತೆ, ಸೌಹಾರ್ದತೆ, ಸಮಾನತೆ ಸಂದೇಶ ನೀಡುವ ಹಬ್ಬವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಬರುವ ಈ ಹಬ್ಬವನ್ನು ಕ್ರೈಸ್ತರು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ. ಕ್ರಿಸ್ಮಸ್ ಪ್ರಯುಕ್ತ ಮೈಸೂರಿನ ಕಾರ್ಮಲ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಮಹಾರಾಜ ಶತಮಾನೋತ್ಸವ ಭವನದಲ್ಲಿ  ಭಾನುವಾರ 24ನೇ ಕ್ಯಾರಲ್ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕೆಂಪು, ಬಿಳಿಯ ಬಣ್ಣಗಳನ್ನು ತೊಟ್ಟ ಪುಟಾಣಿಗಳು ತಮ್ಮ ಪುಟ್ಟ ಕಂಠಗಳಲ್ಲಿ ಗಾನಸುಧೆಯನ್ನು ಹರಿಸುವ ಮೂಲಕ ಹೊಸ ಲೋಕವನ್ನೇ ಸೃಷ್ಟಿಸಿದ್ದರು. ಕ್ರಿಸ್ತ ಬಂದಾನೂ.. ಪ್ರೀತಿ ತಂದಾನು ಎನ್ನುವ ಹಾಡು ಜನಮನವನ್ನು ಸೂರೆಗೊಂಡಿತು. 121 ಶಾಲೆಯ ಸಾವಿರಕ್ಕೂ ಅಧಿಕ ಮಕ್ಕಳು ತಮ್ಮ ಇಂಪಾದ ಕಂಠಗಳಲ್ಲಿ ಗಾನ ಸುಧೆಯನ್ನು ಹರಿಸಿದರು.

ಪಾಲಗೊಂಡಿದ್ದ ಸಾವಿರಕ್ಕಿಂತಲೂ ಅಧಿಕ ಚಿಣ್ಣರನ್ನು 12 ಗುಂಪುಗಳನ್ನಾಗಿ ಮಾಡಲಾಗಿತ್ತು. ಕಿಂಡರ್ ಗಾರ್ಡನ್ ನ ಪುಟಾಣಿಗಳು 11 ತಂಡದಲ್ಲಿ ಹಾಡಿದರೆ, 25 ಕಿರಿಯ ಪ್ರಾಥಮಿಕ, 23 ಕ್ರೈಸ್ತ ಪ್ರೌಢಶಾಲೆ, 8 ಕಾಲೇಜು, 17 ಧಾರ್ಮಿಕ ಸಂಸ್ಥೆಗಳ ತಂಡ, 22 ಸಾರ್ವಜನಿಕರನ್ನೊಳಗೊಂಡ ವೃತ್ತಿಪರ ಸಂಗೀತಕಾರರು, 12 ಚರ್ಚ್ ಗಳು ಭಾಗವಹಿಸಿ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದರು. 70ಕ್ಕೂ ಅಧಿಕ ಹಾಡುಗಳು ಮೇರಿ ಮತ್ತು ಕ್ರೈಸ್ತನ ಕುರಿತಾಗಿಯೇ ಇತ್ತು. ಕಾರ್ಯಕ್ರಮದಲ್ಲಿ  ಕ್ರಿಸ್ ಮಸ್ ಅಜ್ಜನೆಂದೆ ಖ್ಯಾತಿವೆತ್ತ ಸಾಂತಾಕ್ಲಾಸ್ ಗಮನ ಸೆಳೆದರು.

ಮೈಸೂರು ಬಿಷಪ್ ಡಾ. ಥಾಮಸ್ ಅಂಟೋನಿ ವಾಜಪಿಳ್ಳೈ, ಸಿಸಿಎ ಅಡ್ವೈಸರ್ ಪಾದರ್ ತಿಟೊ ಪುಥುವಾ ಕ್ರಿಸ್ ಮಸ್ ಹಾಗೂ ಹೊಸವರುಷದ ಶುಭಾಶಯ ಕೋರಿದರು.

Leave a Reply

comments

Related Articles

error: