ಸುದ್ದಿ ಸಂಕ್ಷಿಪ್ತ
ನಾಳೆ ಅಭಿನಂದನಾ ಸಮಾರಂಭ
ಮೈಸೂರು,ಜೂ.15 : ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಜೂ.16ರ ಸಂಜೆ 5.30ಕ್ಕೆ ಜೆಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಕ.ರಾ.ಒ.ವಿ.ವೇ ಅಧ್ಯಕ್ಷೆ ಹೆಚ್.ಎಲ್.ಯಮುನಾ ಅಧ್ಯಕ್ಷತೆ ವಹಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ತುಮಕೂರು ವಿವಿ ಉಪಕುಲಪತಿ ವೈ.ಎಸ್.ಸಿದ್ಧೇಗೌಡ ಅವರನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿನಂದಿಸುವರು. (ಕೆ.ಎಂ.ಆರ್)