
ಪ್ರಮುಖ ಸುದ್ದಿಮೈಸೂರು
ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲಿಕನ ಬಂಧನ
ರೈಲ್ವೆ ಇಲಾಖೆಯ 50 ಕೋಟಿ ರೂ. ಮೌಲ್ಯದ ವಸ್ತುಗಳ ಕಳವು ಪ್ರಕರಣದ ಆರೋಪ ಎದುರಿಸುತ್ತಿದ್ದ ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲಿಕನನ್ನು ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲಿಕ ಪವನ್ ಎಂದು ಗುರುತಿಸಲಾಗಿದ್ದು, ನವದೆಹಲಿಯ ಆತನ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊಲ್ಕತ್ತದ ಜೋಸೆಫ್ ಆ್ಯಂಡ್ ಜೋಸೆಫ್ ಕಂಪನಿಗೂ ಈತನೇ ಮಾಲಿಕನಾಗಿದ್ದ ಎಂದು ತಿಳಿದು ಬಂದಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಈ ಕಂಪನಿ ರೈಲ್ವೇ ಬೋಗಿ ತಯಾರಿಸುತ್ತಿತ್ತು. ಪವನ್ ಕೊಲ್ಕತ್ತಾ, ಅಂಬೋತಿ ಮತ್ತು ಮೈಸೂರಿನಲ್ಲಿ ಟೈರ್ ಉತ್ಪಾದನಾ ಕಾರ್ಖಾನೆಗಳ ಮಾಲಿಕನಾಗಿದ್ದ ಎನ್ನಲಾಗುತ್ತಿದೆ.
ಮೈಸೂರಿನ ಫಾಲ್ಕನ್ ಟೈರ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಎರಡು ವರ್ಷಗಳಿಂದ ವೇತನ ನೀಡದೇ ಸತಾಯಿಸುತ್ತಿದ್ದು, ವೇತನ ಸಿಗದ ಕೆಲವು ಕಾರ್ಮಿಕರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೂ ಯತ್ನ ನಡೆಸಿದ್ದರು. ಭಾನುವಾರ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ನವದೆಹಲಿಯಲ್ಲಿನ ಆತನ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.