ಸುದ್ದಿ ಸಂಕ್ಷಿಪ್ತ

ಜೂನ್ 20 : ಸಾರ್ವಜನಿಕ ಅಹವಾಲು ಸಭೆ

ಮೈಸೂರು, ಜೂ,16:-  ಮೈಸೂರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಕಳಸ್ತವಾಡಿ ಗ್ರಾಮದ ವರೆಗೆ 131.068 ನೇ ಸರಪಳಿಯಿಂದ 135.304 ನೇ ಸರಪಳಿವರೆಗೆ ಒಟ್ಟು 4.236 ಕಿಲೋಮೀಟರ್‍ಗಳು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎಡ ಮತ್ತು ಬಲಗಳಲ್ಲಿ ಪ್ರಸ್ತುತ ಇರುವ ವಿವಿಧ ಜಾತಿಯ 209 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8(3) (VII)ರಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 20-06-2018 ರಂದು ಅಪರಾಹ್ನ 4 ಗಂಟೆಗೆ ಮೈಸೂರು-ಬೆಂಗಳೂರು ರಸ್ತೆ, ಸಿದ್ದಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಪಕ್ಕ, ಮೈಸೂರು ತಾಲೂಕು, ಮೈಸೂರು ಜಿಲ್ಲೆ ಇಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.

ಈ ಸಂಬಂಧ ಸಾರ್ವಜನಿಕರು ನಿಗದಿತ ಸಮಯಕ್ಕೆ ಹಾಜರಾಗಿ ಮರಗಳನ್ನು ತೆರೆವುಗೊಳಿಸುವ ವಿಚಾರದಲ್ಲಿ ಸಲಹೆ/ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಲ್ಲಿಸಬಹುದು. ಈ ಕೆಳಗೆ ನೀಡಿರುವ ಇಮೇಲ್ [email protected] ಅಥವಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವಿಭಾಗ, ಮೈಸೂರು. ಅರಣ್ಯ ಭವನ, 1ನೇ ಮಹಡಿ, ಅಶೋಕಪುರಂ, 6ನೇ ಕ್ರಾಸ್, ಮೈಸೂರು-570008 ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: