ಮೈಸೂರು

ಕನ್ನಗಳ್ಳರ ಬಂಧನ : 12ಲಕ್ಷರೂ.ಮೌಲ್ಯದ ಚಿನ್ನಾಭರಣ ವಶ

ಮೈಸೂರು,ಜೂ.16:-  ಮೈಸೂರು ನಗರದ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿ ಕಳವು ಮಾಲು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದ  ಕನ್ನ ಕಳುವು ಆರೋಪಿಗಳನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿ 12ಲಕ್ಷರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ನಡೆಯುತ್ತಿದ್ದ ಕನ್ನ ಕಳುವು ಪ್ರಕರಣಗಳ ಪತ್ತೆಗೆ ಮೈಸೂರು ನಗರದ ಪೊಲೀಸ್ ಆಯುಕ್ತರು ಸಿ.ಸಿ.ಬಿ. ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಜೂ.14ರಂದು ವಿಶೇಷ ಕಾರ್ಯಾಚರಣೆ ನಡೆಸಿ  ಸೈಯದ್ ಇಮ್ರಾನ್ ಬಿನ್ ಸೈಯದ್ ಅಹ್ಮದ್,(24) ಚಿಕ್ಕೇಗೌಡನ ದೊಡ್ಡಿ,  ಮಂಡ್ಯ ಜಿಲ್ಲೆ, ಸೈಯದ್‍ಖಾಲೀದ್ ಬಿನ್ ನವಾಜ್(30), ಚನ್ನಪಟ್ಟಣ, ರಾಮನಗರ ಜಿಲ್ಲೆ ಎಂಬಿಬ್ಬರನ್ನು ಬಂಧಿಸಿದೆ. ಇವರನ್ನು ವಶಕ್ಕೆ ತೆಗದುಕೊಂಡು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಹಾಗೂ ಹುಬ್ಬಳಿಯಲ್ಲಿ ಕನ್ನ ಕಳುವು ಮಾಡಿರುವ ಬಗ್ಗೆ ತಿಳಿಸಿದ್ದು, ಆರೋಪಿಗಳಿಂದ ಒಟ್ಟು 12,80,000ರೂ. ಮೌಲ್ಯದ 427 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯದಿಂದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ 03, ಅಶೋಕಪುರಂ-1, ವಿದ್ಯಾರಣ್ಯಪುರಂ-1, ಉದಯಗಿರಿ-1, ವಿಜಯನಗರ-1, ದೇವರಾಜ-1 ಹಾಗೂ ಹುಬ್ಬಳ್ಳಿಯ ಘಂಟಕೇರಿ ಪೊಲೀಸ್ ಠಾಣೆಯ -1 ಪ್ರಕರಣಗಳು (ಒಟ್ಟು 09 ಪ್ರಕರಣಗಳು) ಪತ್ತೆ ಯಾಗಿವೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಮಹಾನಂದ ಬಿ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಎ.ಸಿ.ಪಿ. ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿ.ಸಿ.ಬಿ. ಪೊಲೀಸ್ ಇನ್ಸ್‍ಪೆಕ್ಟರ್ ಶಿವಸ್ವಾಮಿ, ಎ.ಎಸ್.ಐ. ಚಂದ್ರೇಗೌಡ ಸಿಬ್ಬಂದಿಗಳಾದ  ಎಂ.ಆರ್.ಗಣೇಶ್, ಚಿಕ್ಕಣ್ಣ,  ಲಕ್ಷ್ಮೀಕಾಂತ್, ರಾಮಸ್ವಾಮಿ, ಶಿವರಾಜು,  ಯಾಕುಬ್ ಷರೀಫ್, ಅಸ್ಗರ್‍ಖಾನ್,   ರಾಜೇಂದ್ರ,  ನಿರಂಜನ,  ಪ್ರಕಾಶ್,  ಆನಂದ್, ಚಾಮುಂಡಮ್ಮ, ಶಿವಕುಮಾರ್, ಗೌತಮ್ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: