ಮೈಸೂರು

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಪಿಲಾ‌ನದಿ

ಮೈಸೂರು,ಜೂ.16:- ಕಬಿನಿ ಜಲಾಶಯದಿಂದ ನೀರು ಹೊರಬಿಟ್ಟ ಹಿನ್ನಲೆಯಲ್ಲಿ ಕಪಿಲಾ‌ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ .

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಪಿಲಾ‌ ನದಿ ತುಂಬಿ ಹರಿಯುತ್ತಿದ್ದು, ದಡದ ಮೇಲೆ ನದಿ ನೀರು ಹರಿಯುತ್ತಿದೆ. ಭಕ್ತಾದಿಗಳು ದಡದ ಮೇಲೆಯೇ ಸ್ನಾನ ಮಾಡುತ್ತಿದ್ದಾರೆ. ನಂಜನಗೂಡು ಮುಖ್ಯ ರಸ್ತೆ 10 ಮೀಟರ್ ಅಂತರದಲ್ಲಿದೆ‌. ಕಪಿಲಾ‌ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಅಧಿಕಾರಿಗಳು  ಸೂಚನೆ ನೀಡಿದ್ದಾರೆ. ಅಧಿಕಾರಿಗಳು ನದಿಯ ದಂಡೆಯ ಮೇಲೆ ಸೂಚನ ಫಲಕ ಹಾಕಿದ್ದಾರೆ. ತಾಲೂಕು ಆಡಳಿತ ಮಂಡಳಿ ನದಿಗೆ ಇಳಿಯದಂತೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದೆ. ನದಿ ದಂಡೆಯ ಮೇಲಿದ್ದ ತಾತ್ಕಾಲಿಕ ಅಂಗಡಿಗಳನ್ನು‌ ತೆರವುಗೊಳಿಸಲಾಗಿದೆ. ರಾತ್ರಿ‌ ನದಿ ನೀರು ಹೆಚ್ಚಳವಾಗುವ ಸಾಧ್ಯತೆ ಹಿನ್ನಲೆಯಲ್ಲಿ ರಸ್ತೆ ಬಳಿ ಇರುವ ಎರಡ್ಮೂರು ಅಂಗಡಿ ಸ್ಥಳಾಂತರಕ್ಕೂ ಸೂಚನೆ ನೀಡಲಾಗಿದೆ. ಆದರೂ ನದಿಯ ದಂಡೆಯ ಮೇಲೆ ಭಕ್ತಾದಿಗಳು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಭಕ್ತಾದಿಗಳನ್ನು  ನಿಯಂತ್ರಿಸಲು ಖಾಸಗಿ ಭದ್ರತಾ ಸಿಬ್ಬಂದಿಗಳು ಹರಸಾಹಸ ಪಟ್ಟರು. ವಾರಾಂತ್ಯವಾಗಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: