ಮೈಸೂರು

ರಾಮಾನುಜಾಚಾರ್ಯರ ಕಾಲದ ವಿಗ್ರಹ ವಶ; ದೇವಾಲಯದಿಂದ ಕದ್ದು ಮಾರುತ್ತಿದ್ದವರ ಬಂಧನ

ಬೈಲಕುಪ್ಪೆ: ಹದಿನಾಲ್ಕು ಶತಮಾನ ಹಳೆಯಾದಾದ 18 ಕೆ.ಜಿ. 300 ಗ್ರಾಂ. ತೂಕವುಳ್ಳ ಶ್ರೀ ಲಕ್ಷ್ಮೀ ವಿಗ್ರಹವನ್ನು ಕದ್ದು ಮಾರಟ ಮಾಡಲು ಯತ್ನಿಸುತಿದ್ದ ಆರೋಪದ ಮೇಲೆ ಇಬ್ಬರನ್ನು ಬೈಲಕುಪ್ಪೆ ಪೋಲಿಸರು ಬಂಧಿಸುವಲ್ಲಿ ಭಾನುವಾರ ಯಶಸ್ವಿಯಾಗಿದ್ದಾರೆ.

ತಾಲೊಕಿನ ಕೊಪ್ಪ ಗ್ರಾಮದಲ್ಲಿ ಈ ವಿಗ್ರಹವನ್ನು ಸರ್ಕಾರಿ ಬಸ್‌ನಲ್ಲಿ ತಂದು ಮಾರಾಟ ಮಾಡಲು ಯತ್ನಿಸುತಿದ್ದ ಆರೋಪದ ಮೇಲೆ ಮಧು(25) ಮತ್ತು ಶರತ್ (23) ಎಂಬುವರನ್ನು ಬಂಧಿಸಲಾಗಿದೆ.

ಘಟನೆ ವಿವರ: ಈ ವಿಗ್ರಹವು ವರ್ಷದ ಹಿಂದೆ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದಲ್ಲಿರುವ ನಂಬಿನಾರಯಣಸ್ವಾಮಿ ದೇವಾಲಯದಿಂದ ಕಾಣೆಯಾದ ಶ್ರೀ ಲಕ್ಷ್ಮೀ ವಿಗ್ರಹ ಎಂದು ತಿಳಿದುಬಂದಿದೆ.

ಈಗ ಕಳವು ಆರೋಪ ಬಂಧಿತ ಮಧು ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವನು ಮತ್ತು ಶರತ್ ಕೆಆರ್ ಪೇಟೆ ಪಟ್ಟಣ ನಿವಾಸಿ.

dscn8848
ವಶಪಡಿಸಿಕೊಂಡ ವಿಗ್ರಹ.

ಇದು ರಾಮಾನುಜಾಚಾರ್ಯರ ಕಾಲದ ವಿಗ್ರಹ ಎನ್ನಲಾಗಿದ್ದು, ಅಪಾರ ಮೌಲ್ಯವುಳ್ಳದಾಗಿದೆ ಎಂದು ತಿಳಿದುಬಂದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳಾದ ಮಧು ಮತ್ತು ಶರತ್ ಅವರುಗಳು ವರ್ಷದ ಹಿಂದೆ ಹಗಲು ಸಮಯದಲ್ಲೇ ವಿಗ್ರಹವನ್ನು ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾರೆ.

ಇದರ ಬಗ್ಗೆ ಇಲ್ಲಿನ ಪೋಲಿಸರು ಅದೇ ದೇವಾಲಯಕ್ಕೆ ತೆರಳಿ ಸ್ಥಳ ಪರಿಶೀಲಿಸದಾಗ ಇದರ ನಕಲು ವಿಗ್ರಹವಿರುವುದು ಪತ್ತೆಯಾಗಿದೆ. ಇದರ ಬಗ್ಗೆ ಅಲ್ಲಿನ ಅರ್ಚಕ ಶ್ರೀನಿವಾಸ್ ಅವರನ್ನು ವಿವರಿಸಿದಾಗ ಬೈಲಕುಪ್ಪೆ ಪೋಲಿಸ್ ಠಾಣೆಗೆ ಶ್ರೀನಿವಾಸ್ ಮತ್ತು ಗ್ರಾಮಸ್ಥರು ಆಗಮಿಸಿ ವಿಗ್ರಹವನ್ನು ವಿಕ್ಷಣೆ ಮಾಡಿ ವಿಗ್ರಹ ಗುರುತಿಸಿದರು.

ಈ ಬಗ್ಗೆ ಅರ್ಚಕ ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡಿ, 14ನೇ ಶತಮಾನದಲ್ಲಿ ರಾಮಾನುಜಾಚಾರ್ಯರ ಸಂಚಾರ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಐದು ಸ್ಥಳಗಳಲ್ಲಿ ಅಂದರೆ ನಂಬಿನಾರಯಣ ಸ್ವಾಮಿ, ಮೇಲುಕೊಟೆ ಚೆಲುವನಾರಾಯಣಸ್ವಾಮಿ, ಗದುಗಿನ ವೀರಾನಾರಯಣಸ್ವಾಮಿ, ತಲಕಾಡಿನ ಕಿರ್ತಿನಾರಯಣಸ್ವಾಮಿ, ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯಗಳಲ್ಲಿ ಈ ರೀತಿಯ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.

ನಂತರದಲ್ಲಿ ಅಲ್ಲಿನ ಜೈನರನ್ನು ವೈಷ್ಣವರಾಗಿ ಪರಿವರ್ತನೆ ಮಾಡುವ ಮೂಲಕ ವೈಷ್ಣವ ಧರ್ಮವನ್ನು ಪಾಲಿಸುವಂತೆ ಮಾಡಿದ್ದರು ಎಂದು ಅರ್ಚಕರು ವಿವರಿಸಿದರು.

ಈ ಬಗ್ಗೆ ಬೈಲಕುಪ್ಪೆ ಪೋಲಿಸ್ ಠಾಣೆಯ ಪಿ.ಲೊಕೇಶ್ ಮಾತನಾಡಿ, ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾದ ರವಿ ಡಿ ಚೆನ್ನಣ್ಣನವರ್ ಮತ್ತು ಎಎಸ್ಪಿ ಮತ್ತು ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಇವರನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ದೂರು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿ ಎಎಸೈ ವಿಜೇಂದ್ರಕುಮಾರ್, ಕೃಷ್ಣ, ರವೀಶ್, ಸೊಮಶೇಖರ್ ಅಶೋಕ, ಮಹದೇವ, ಶತ್ರುಘ್ನ, ನಂದೀಶ್ ಅವರು ಕರ್ತವ್ಯ ನಿರತರಾಗಿದ್ದರು.

  • ವರದಿ: ರಾಜೇಶ್

Leave a Reply

comments

Related Articles

error: