ಮೈಸೂರು

ಯೋಗ ದಿನಾಚರಣೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ : ಸಚಿವ ಸಾ.ರಾ.ಮಹೇಶ್

ಮೈಸೂರು,ಜೂ.18:- ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಮೈಸೂರಿನ ರೇಸ್ ಕೋರ್ಸ್ ನಲ್ಲಿ ಪೂರ್ವಭಾವಿ ಯೋಗಾಭ್ಯಾಸ ನಡೆಯಿತು.

ನಿನ್ನೆ ನಡೆದ ಯೋಗಾಭ್ಯಾಸದಲ್ಲಿ ಸುಮಾರು 10ಸಾವಿರ ಯೋಗೋತ್ಸಾಹಿಗಳು ಪಾಲ್ಗೊಂಡಿದ್ದರು. ಯೋಗ ತರಬೇತಿ ಕೇಮದ್ರದ ಯೋಗಪಟುಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಸದಸ್ಯರು, ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.  ಸುಮಾರು 9 ಆಸನಗಳು ಪ್ರದರ್ಶನಗೊಂಡವು. ಯೋಗಾಭ್ಯಾಸದಲ್ಲಿ ಪಾಲ್ಗೊಂಡ ಸಚಿವ ಸಾ.ರಾ.ಮಹೇಶ್ ಮಾತನಾಡಿ ಈ ಬಾರಿಯೂ ಯೋಗ ಗಿನ್ನೆಸ್ ದಾಖಲೆಗೆ ಸಿದ್ಧತೆ ನಡೆಸಿದೆ. ಯೋಗ ದಿನಾಚರಣೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್,ನಾಗೇಂದ್ರ ಮತ್ತಿತರರು ಯೋಗಾಭ್ಯಾಸ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: