ಮೈಸೂರು

ರೈಲಿಗೆ ಸಿಲುಕಿ ವೃದ್ಧ ಸಾವು

ಮೈಸೂರು,ಜೂ.18:- ರೈಲಿಗೆ ಸಿಲುಕಿ ವೃದ್ಧರೋರ್ವರು ಸಾವನ್ನಪ್ಪಿದ ಘಟನೆ ನಂಜನಗೂಡಿನ ಮಲ್ಲನಮೂಲೆ ಬಳಿ ನಡೆದಿದೆ.

ಮೃತರನ್ನು ಸೋನಹಳ್ಳಿ ಗ್ರಾಮದ ಸಿದ್ದಪ್ಪ(75) ಎಂದು ಗುರುತಿಸಲಾಗಿದ್ದು, ಬಸ್‌ ನಿಲ್ದಾಣಕ್ಕೆ ಹೋಗಲು ರೈಲ್ವೆ ಟ್ರ್ಯಾಕ್ ಮೇಲೆ  ಹೋಗುತ್ತಿದ್ದರು. ಈ ವೇಳೆ ಮೈಸೂರಿನಿಂದ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಿದ್ದಪ್ಪ ಕಿವುಡರಾಗಿದ್ದ ಕಾರಣ ರೈಲು ಬರುವ ಶಬ್ದ ಕೇಳಿಸಿಲ್ಲ. ಇದರಿಂದ ರೈಲು ಬಂದ ಶಬ್ದ ಕೇಳಿಸದೆ ಮೈಮೇಲೆ ರೈಲು ಹರಿದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: