ಕ್ರೀಡೆಪ್ರಮುಖ ಸುದ್ದಿ

ಮಕ್ಕಳ ಜತೆ ಯೋಗ ಮಾಡಿದ್ದು ಸಂತಸ ತಂದಿದೆ : ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್

ರಾಜ್ಯ(ಬೆಂಗಳೂರು)ಜೂ.18:- ವಿಶ್ವ ಯೋಗ ದಿನಾಚರಣೆಯ ವಿಶೇಷ ಆಚರಣೆಯ ಅಂಗವಾಗಿ ಆಸೀಸ್ ತಂಡದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ನಗರದಲ್ಲಿ ವಿಕಲ ಚೇತನ ಮಕ್ಕಳೊಂದಿಗೆ ಯೋಗ ದಿನಾಚರಣೆಯನ್ನಾಚರಿಸಿದರು.

ನಾಗವಾರದ ಮ್ಯಾನ್ಫೂಕನ್ವೆಕ್ಷನ್ ಸೆಂಟರ್ ನಲ್ಲಿ ಅಕ್ಷರ ಯೋಗ ಟೀಂನಿಂದ ವಿಕಲಚೇತನ ಮಕ್ಕಳ ಜತೆ ನಡೆಯುತ್ತಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪಾಲ್ಗೊಂಡು ಮಾತನಾಡಿ, ಯೋಗ ಎನ್ನುವುದು ಒಂದು ಪಾಸಿಟಿವ್ ಎನರ್ಜಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತುಂಬ ಖುಷಿ ಕೊಟ್ಟಿದೆ. ಮಕ್ಕಳ ಜತೆ ಯೋಗ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ಯೋಗ ಕಾರ್ಯಕ್ರಮದಲ್ಲಿ ನಟಿ ಸಂಜನಾ ಗರ್ಲಾನಿ, ಆರ್ ವಿ ದೇವರಾಜ್ ಪತ್ನಿ ಮಂಜುಳಾ ದೇವರಾಜ್ ಮತ್ತಿತರರು ಭಾಗವಹಿಸಿದ್ದರು. ಸಾವಿರಾರು ವಿಕಲಚೇತನ ಮಕ್ಕಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: