ಮೈಸೂರು

ಕ್ರಿಸ್ ಮಸ್ ಮೇಳದಲ್ಲಿ ಮೇಳೈಸಿದ ವಿವಿಧ ಕಾರ್ಯಕ್ರಮ

ಕ್ರಿಸ್ ಮಸ್ ಹತ್ತಿರ ಬರುತ್ತಿದ್ದಂತೆ ಕ್ರೈಸ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ವಿವಿಧೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕರ್ನಾಟಕ ಅಲ್ಪಸಂಖ್ಯಾತರ ಶ್ರಮಶಕ್ತಿ ವೇದಿಕೆ ಹಾಗೂ ಸ್ವಯಂಪ್ರೇರಿತ ನಿಧಿ ಸಹಕಾರದಲ್ಲಿ ಬೆಲವತ್ತ ಗ್ರಾಮದ ಪುಷ್ಪಗಿರಿಯಲ್ಲಿ ಕ್ರಿಸ್ ಮಸ್ ಮೇಳವನ್ನು ಆಯೋಜಿಸಲಾಗಿತ್ತು.

ಮೇಳವನ್ನು ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕ ಮಾಧವರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರಿಶ್ಚಿಯನ್ನರು ಅವರಿಗಾಗಿ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ರಿಸ್ ಮಸ್ ಗೆ ಸಂಬಂಧಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ, ವಿವಿಧ ಸ್ಪರ್ಧೆಗಳು, ಆಟೋಟಗಳು ನಡೆಯಿತು. ಮನೆಯಲ್ಲಿಯೇ ತಯಾರಿಸಲಾದ ಆಹಾರ ಮಳಿಗೆಯನ್ನು ತೆರೆಯಲಾಗಿತ್ತು. ಎಂಟಕ್ಕೂ ಅಧಿಕ ಮಹಿಳಾ ಸಂಘಗಳು ಪಾಲ್ಗೊಂಡಿದ್ದವು. ಮಕ್ಕಳಿಂದ ಕ್ಯಾರೋಲ್ ಗಾಯನ ನಡೆಯಿತು. ಸಾಂತಾಕ್ಲಾಸ್ ಪುಟಾಣಿ ಮಕ್ಕಳಿಗೆ ಉಡುಗೊರೆಗಳನ್ನು ನೀಡಿ ಶುಭಾಶಯ ಕೋರಿದರು. 500ಕ್ಕೂ ಹೆಚ್ಚು ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು.

ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ಜಿಲ್ಲಾ ಅಧಿಕಾರಿ ಪುಟ್ಟರಾಜು, ವೇದಿಕೆ ಮುಖ್ಯಸ್ಥೆ ಮಾರ್ಗರೇಟ್, ತೆರೆಸಾ ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: