ದೇಶ

ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಪ್ರತಿಭಟನೆ: ಕೇಜ್ರಿವಾಲ್ ಗೆ ದೆಹಲಿ ಹೈ ಕೋರ್ಟ್ ತರಾಟೆ

ನವದೆಹಲಿ,ಜೂ.18-ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಚೇರಿಯಲ್ಲಿ ಧರಣಿ ಕುಳಿತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವನ್ನು ದೆಹಲಿ ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಅವರು ನಡೆಸುತ್ತಿರುವ ಧರಣಿಯ ವಿರುದ್ಧ ಹಾಗೂ ದೆಹಲಿ ಸರ್ಕಾರದ ಐಎಎಸ್ ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ದಾಖಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ಕುರಿತಂತೆ ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎ.ಕೆ.ಚಾವ್ಲಾ ಮತ್ತು ನವೀನ್ ಚಾವ್ಲಾ ಅವರಿದ್ದ ಪೀಠ, ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಕೇಜ್ರಿವಾಲ್ ಧರಣಿ ಕೂರಲು ಬಿಟ್ಟವರು ಯಾರು ಎಂದು ಪ್ರಶ್ನಿಸಿದೆ.

ನೀವು ಕಳೆದ 8 ದಿನಗಳಿಂದ ಪ್ರತಿಭಟನಾನಿರತ ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಕೈಗೊಂಡಿದ್ದೀರಿ. ಈ ಧರಣಿಯನ್ನು ಕೈಗೊಳ್ಳಲು ನಿಮಗೆ ಅನುಮತಿ ನೀಡಿದವರು ಯಾರು? ಎಂಬುದರ ಜತೆಗೆ ಧರಣಿಯ ಮೌಲ್ಯತೆಯನ್ನು ಪ್ರಶ್ನಿಸಿರುವ ಹೈಕೋರ್ಟ್ ನಿಮ್ಮ ಈ ನಡೆಯನ್ನು ಪ್ರತಿಭಟನೆ ಎಂದು ಪರಿಗಣಿಸಲಾಗುವುದಿಲ್ಲ. ಇನ್ನು ಮುಂದೆ ಯಾರ ಮನೆ ಹಾಗೂ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ.

ಧರಣಿಯನ್ನು ನಿಲ್ಲಿಸುವಂತೆ ಕೇಜ್ರಿವಾಲ್‌ಗೆ ಸೂಚಿಸಬೇಕೆಂದು ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ನ್ಯಾಯಾಲಯದ ಬಳಿ ಮನವಿ ಮಾಡಿದ್ದರು.

ಕಳೆದ ಒಂದು ವಾರದಿಂದ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್, ಗೋಪಾಲ್ ರೈ ಧರಣಿ ಕೈಗೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: