ಮೈಸೂರು

ಬೆಕ್ಕೆರೆಯಲ್ಲಿ ಕಡೆ ಕಾರ್ತೀಕ ವಾರದ ಜಾತ್ರೆ: ಭಕ್ತಿಯಲ್ಲಿ ಮಿಂದ ಗ್ರಾಮಸ್ಥರು

ಬೈಲಕುಪ್ಪೆ: ತಾಲೂಕಿನ ಬೆಕ್ಕರೆ ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಅರ್ಚಕರಾದ ವಿಶ್ವನಾಥ್ ಹಾಗೂ ಬಸವರಾಜ್‌ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಶ್ರೀ ಸ್ವಾಮಿಗೆ ಅಭಿಷೇಕ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವವು ಗ್ರಾಮದ ಎಲ್ಲಾ ಬೀದಿಗಳಲ್ಲಿ ನಗಾರಿ ವಿಶೇಷ ವಾದ್ಯಗಳೊಂದಿಗೆ ಸಂಚರಿಸಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ಮುಂಜಾನೆಯಿಂದ ರಾತ್ರಿಯವರೆಗೆ ಬಂದು ಪಾಲ್ಗೊಂಡರು.

ಕಾರ್ತಿಕ ಮಾಸದ ಅಮಾವಾಸ್ಯೆಯ ನಂತರದ ಸೋಮವಾರದಲ್ಲಿ ಪೂಜೆ ಜರುಗುವುದು ಮತ್ತು ದೇವಸ್ಥಾನದಲ್ಲಿ ಬಸವನಿರುವುದು ಈ ಗ್ರಾಮದ ವಿಶೇಷವಾಗಿದೆ. ದೇವಸ್ಥಾನದಲ್ಲಿ ಕಡೆಯ ಕಾರ್ತಿಕ ಸೋಮವಾರದ ಅಂಗವಾಗಿ ದಾಸೋಹ ಸಮಿತಿ ವತಿಯಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಚಂದ್ರಶೇಖರ್ (ನಟರಾಜ್) ಮಾತನಾಡಿ, ನಾಲ್ಕು ವರ್ಷಗಳಿಂದ ದಾಸೋಹ ಕಾರ್ಯಕ್ರಮ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುತ್ತಿದೆ. ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ ಎಂದರು.

ದೇವಾಲಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರಾಚಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಕಡೆಯ ಕಾರ್ತಿಕ ಪೂಜೆ ಅದ್ಧೂರಿಯಿಂದ ಜರುಗಿದ್ದು, ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಹರಕೆ ಹೊತ್ತು ಕಾರ್ತಿಕ ಮಾಸದ ಸೋಮವಾರ ಮತ್ತು ಶುಕ್ರವಾರದಂದು ಪಲ್ಲಕ್ಕಿ ಉತ್ಸವ ಸೇವೆ ಮಾಡುತ್ತಾರೆ ಎಂದರು.

ಗ್ರಾಮದ ಯಜಮಾನ್ ಹುಚ್ಚೇಗೌಡರು, ಮುಖಂಡರಾದ ನಂಜಪ್ಪ, ರುದ್ರಾರಾಧ್ಯ, ಈರಯ್ಯ, ಲಕ್ಕಶೆಟ್ಟಿ, ವಿರುಪಾಕ್ಷಾಚಾರ್, ಬಸವರಾಜೇ ಅರಸ್, ಸಮಿತಿಯ ನಾಗಭೂಷಣಾರಾಧ್ಯ, ಯೋಗೇಶ್, ರವಿ, ಹರೀಶ್, ಶಿಕ್ಷಕ ವಿಜಯ್, ಜಗದೀಶ್, ಲೋಕೇಶ್, ಮಹದೇವ್, ಬಸವರಾಜೇಗೌಡ, ಸತೀಶ್ ಆರಾಧ್ಯ, ಸೋಮಶೇಖರ್, ಪ್ರವೀಣ್, ಮೋಹನ್ ಸೇರಿದಂತೆ ಗ್ರಾಮಸ್ತರು, ಭಕ್ತರು ಹಾಜರಿದ್ದರು.

photo-01-1

Leave a Reply

comments

Related Articles

error: