ಮೈಸೂರು

ದತ್ತಪೀಠ ಆಸ್ಥಾನ ವಿದ್ವಾನ್ ಪ್ರಶಸ್ತಿ ಪ್ರದಾನ

ದತ್ತಾತ್ರೇಯ ಜಯಂತ್ಯುತ್ಸವ ಪ್ರಯುಕ್ತ ತಮಿಳುನಾಡಿನ ತವಿಲ್ ವಾದ್ಯ ವಿದ್ವಾಂಸ ಎ.ಇಳಂಗೋವನ್ ಅವರಿಗೆ ಈ ಬಾರಿಯ ದತ್ತಪೀಠ ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನೀಡಿ ಗೌರವಿಸಿದರು.

ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕೊಡಮಾಡುವ ದತ್ತಪೀಠ ಆಸ್ಥಾನ್ ವಿದ್ವಾನ್ ಬಿರುದನ್ನು ಶ್ರೀಗಳು ಪ್ರದಾನ ಮಾಡಿದರು. ಈ ಸಂದರ್ಭ ದತ್ತ ವಿಜಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಆಶ್ರಮದಲ್ಲಿ ಡಿ.12ರಂದು ದತ್ತ ಜಯಂತ್ಯುತ್ಸವದ ಅಂಗವಾಗಿ ದತ್ತಾತ್ರೇಯ ಹೋಮ, ಶ್ರೀಚಕ್ರ ಪೂಜೆ, ದತ್ತಾತ್ರೇಯ ಸ್ವಾಮಿಗೆ ಕ್ಷೀರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Reply

comments

Related Articles

error: