ಪ್ರಮುಖ ಸುದ್ದಿಮೈಸೂರು

ಸುತ್ತೂರು ಮಠಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ : ಪರಿಹಾರ ತಕ್ಷಣ ನೀಡುವಂತಹ ವ್ಯವಸ್ಥೆಯಾಗಲಿ ಅಧಿಕಾರಿಗಳಿಗೆ ಸೂಚನೆ

ಮೈಸೂರು,ಜೂ.18:- ಸುತ್ತೂರು ಮಠಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿದರು.

ಸಮಿಶ್ರ ಸರ್ಕಾರದಲ್ಲಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಇಂದು ಮೈಸೂರಿಗೆ ಆಗಮಿಸಿದ ಅವರು ಚಾಮುಂಡಿ ಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ಸುತ್ತೂರು ಶ್ರೀಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕಂದಾಯ ಸಚಿವನಾಗಿ ಹಲವು ಕಡೆ ಪರಿಶೀಲನೆ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗದ ಪ್ರವಾಸ ಮುಗಿಸಿ ಬಂದಿದ್ದೇನೆ. ರಾಜ್ಯದಲ್ಲಿ ಬಹುತೇಕ ಎಲ್ಲಾ ಕಡೆ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಕಡಿಮೆ ಮಳೆ ಬಿಟ್ಟರೆ ಎಲ್ಲಾ ಕಡೆ ಹೆಚ್ಚು ಮಳೆಯಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿಗಳಿಗೆ ಪರಿಹಾರದ ಹಣವಾಗಿ 5 ಕೋಟಿ ಮೀಸಲಿಟ್ಟಿದ್ದೇವೆ. ಹಣಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದರು. ಜಿಲ್ಲಾಧಿಕಾರಿ ವಾರದಲ್ಲಿ ಒಮ್ಮೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಬೇಕು. ಪರಿಹಾರ ತಕ್ಷಣ ನೀಡುವಂತಹ ವ್ಯವಸ್ಥೆಯಾಗಬೇಕು. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿದೆ. ಆದರೆ ಕಾವೇರಿ ಜಲಾನಯನ ಪ್ರದೇಶಕ್ಕೆ ನೀರು ಬಿಡೋ ವಿಚಾರ ನೀರಾವರಿ ಸಚಿವರಿಗೆ ಸೇರಿದೆ. ಸಮಿಶ್ರ ಸರ್ಕಾರ ಉತ್ತಮವಾಗಿ ಆಡಳಿತ ನೀಡುತ್ತಿದೆ. ನಮ್ಮ ಸಚಿವರು ಶಾಸಕರಿಗೆ ಯಾವುದೇ ಗೊಂದಲ ಇಲ್ಲ. ಸಾಲ ಮನ್ನಾ ವಿಚಾರಕ್ಕೆ ಸಮಯ ಬೇಕಾಗುತ್ತದೆ. ಎಲ್ಲದಕ್ಕೂ ಸಮಯಾವಕಾಶ ಬೇಕಿದೆ. ಮುಖ್ಯಮಂತ್ರಿಗಳು ಸಾಲ ಮನ್ನಾ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಸಾಲ ಮನ್ನಾ ಶೀಘ್ರದಲ್ಲಿ ಆಗುವಂತಹುದಲ್ಲ. ಕಾಲಾವಕಾಶ ಬೇಕು ಎಂದು ತಿಳಿಸಿದರು.

ಹೊಸ ಬಜೆಟ್ ಗೆ ಸಿದ್ದರಾಮಯ್ಯ ಅಪಸ್ವರ ವಿಚಾರಕ್ಕೆ ಪ್ರತಿಕ್ರಿಯಿಸಿ  ಮಾಧ್ಯಮಗಳು ಹೆಚ್ಚು ಊಹಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಬಜೆಟ್ ಬೇಕೊ ಬೇಟವೋ ಎನ್ನುವುದು ಶೀಘ್ರದಲ್ಲಿ  ತಿಳಿಯಲಿದೆ ಎಂದರು. ಮಾಜಿ ಶಾಸಕ ವಾಸು ಸಚಿವರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: