ಕರ್ನಾಟಕ

ಮರಕ್ಕೆ ಕಾರ್ ಡಿಕ್ಕಿ: ಇಬ್ಬರ ದುರ್ಮರಣ

ಚಿತ್ರದುರ್ಗ,ಜೂ.18: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪನ ಜೊತೆ ಒಂದು ವರ್ಷದ ಕೂಸು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ಸಮೀಪದ ಎನ್.ಜಿ. ಹಳ್ಳಿ ಗೇಟ್ ಬಳಿ ನಡೆದಿದೆ.

ಹೊಸದುರ್ಗದ ಜವಳಿ ಉದ್ಯಮಿ ಮಂಜುನಾಥ್ (40), ಪುತ್ರಿ ರಾಜೇಶ್ವರಿ(01) ಮೃತ ದುರ್ದೈವಿಗಳು.  ಮಂಜುನಾಥ್ ಕುಟುಂಬ ಸಮೇತರಾಗಿ ದಾವಣಗೆರೆಯಿಂದ ಹೊಸದುರ್ಗಕ್ಕೆ ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎನ್.ಜಿ. ಹಳ್ಳಿ ಗೇಟ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ್ ಮತ್ತು ರಾಜೇಶ್ವರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ ಕಾರಿನಲ್ಲಿದ್ದ ಮಂಜುನಾಥ್ ಪತ್ನಿ ಶಿಲ್ಪ, ಮಗಳು ಶಾರದ, ಸಾನ್ವಿತ, ಹಾಗೂ ಸ್ನೇಹಿತ ರಂಗನಾಥ ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ( ಪಿ.ಎಸ್ )

Leave a Reply

comments

Related Articles

error: