ಮೈಸೂರು

ಇ-ಬ್ಯಾಂಕಿಂಗ್ ತರಬೇತಿ ಕಾರ್ಯಾಗಾರ ಯಶಸ್ವಿಗೊಳಿಸಿ : ತಮ್ಮೇಶ್‍ಗೌಡ

ಇ-ಬ್ಯಾಂಕಿಂಗ್ ಯೋಜನೆ ಬಗ್ಗೆ ಯುವ ಮೋರ್ಚಾ ಕಾರ್ಯಕರ್ತರಿಗೆ ರಾಜ್ಯ ಘಟಕದಿಂದ ‘ನೋಟು ಬದಲು ದೇಶ ಮೊದಲು’ ಎನ್ನುವ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ತರಬೇತಿ ಪಡೆದ ನಂತರ ಇ-ಬ್ಯಾಂಕಿಂಗ್ ಸದ್ದುದೇಶದ ಬಗ್ಗೆ ಜನರಿಗೆ ಅರಿವು ಮೂಡಿಸಿ ಗೊಂದಲ ನಿವಾರಿಸಿ ಎಂದು ಬಿಜೆಪಿ ಯವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್‍ಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಯುವ ಮೋರ್ಚಾ ಜಿಲ್ಲಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಡಿ.5 ರಿಂದ 25ರವರೆಗೆ ಇಪ್ಪತ್ತು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಕೇಂದ್ರದ ಬಹುನಿರೀಕ್ಷಿತ ಮಹತ್ವಾಕಾಂಕ್ಷಿ ಯೋಜನೆಯಾದ ನಗದು ರಹಿತ ಬ್ಯಾಂಕಿಂಗ್‍ ವ್ಯವಸ್ಥೆಯು ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು ಡೆಬಿಟ್, ಕ್ರೆಡಿಟ್ ಹಾಗೂ ಕಿಸಾನ್ ಕಾರ್ಡ್‍ಗಳ ಮೂಲಕ ವ್ಯವಹರಿಸಬಹುದಾಗಿದೆ ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು  ಶ್ರಮಿಸಬೇಕು.

ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತರ ನಡೆಸುತ್ತಿದ್ದು ಅವರನ್ನು ವಿಫಲಗೊಳಿಸಬೇಕು ಹಾಗೂ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಂಡುವುದರಿಂದ ಪಾರದರ್ಶಿಕ ವ್ಯವಹಾರದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಯೋಜನೆಯ ಬಗ್ಗೆ ಇರುವ ಗೊಂದಲವನ್ನು ಕಾರ್ಯಕರ್ತರು ನಿವಾರಿಸಬೇಕೆಂದು ಆಶಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಪಣೀಶ್, ಕರುಣಾಕರ್, ದೇವರಾಜ್, ಜಿ.ಎಸ್. ಹೇಮಂತ್, ಕೋಟೆ ವಿಜಯ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: