ಮೈಸೂರು

ಎಂ.ಎಸ್.ಸುಬ್ಬುಲಕ್ಷ್ಮಿಯವರಿಗೆ ಅಹಂಕಾರ ಇರಲಿಲ್ಲ : ಲಕ್ಷ್ಮಿನಟರಾಜನ್

ಮೈಸೂರಿನ ಸರಸ್ವತಿಪುರಂನ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ನವ್ಯಜ್ಯೋತಿ ಸಭಾಂಗಣದಲ್ಲಿ ವೈ.ಟಿ. ಮತ್ತು ಮಾಧುರಿ ತಾತಾಚಾರಿಯವರ ಭ್ರಮರ ಟ್ರಸ್ಟ್ ವತಿಯಿಂದ ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿಯವರ ಜನ್ಮಶತಮಾನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ವಿದ್ವಾನ್ ಮಧುರೈ ಶಿವಗಣೇಶ್ ಅವರಿಗೆ ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಹಾಗೂ ವಿದುಷಿ ವಸುಂಧರಾ ದೊರೆಸ್ವಾಮಿ ಅವರಿಗೆ ಭ್ರಮರ ಟ್ರಸ್ಟಿನ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚೆನ್ನೈನ ಕಲ್ಕಿ ಪತ್ರಿಕಾ ಸಮೂಹದ ಸಂಪಾದಕಿ ಹಾಗೂ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಮೊಮ್ಮಗಳು ಲಕ್ಷ್ಮಿ ನಟರಾಜನ್ ಮಾತನಾಡಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ತಮ್ಮ ಮಾಂತ್ರಿಕ ಸಂಗೀತದ ಮೂಲಕ ಭಕ್ತಿಭಾವ ಅರಳಿಸಿದರು. ಸರಳ ಜೀವನವನ್ನು ಇಷ್ಟಪಡುತ್ತಿದ್ದರು. ಕಲಾವಿದೆ ಎಂಬ ಅಹಂಕಾರ ಇರಲಿಲ್ಲ. ಯಾರಾದರೂ ಸಣ್ಣಪುಟ್ಟ ಸಾಧನೆ ಮಾಡಿದರೂ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು ಎಂದು ಅವರನ್ನು ನೆನಪಿಸಿಕೊಂಡರು.

ವೇದಿಕೆಯಲ್ಲಿ ಪಟೀಲುವಾದಕ ಡಾ.ಮೈಸೂರು ಮಂಜುನಾಥ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: