ಮೈಸೂರು

ಅಲ್ಜೈಮರ್ ನಿಯಂತ್ರಣಕ್ಕೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕು : ಡಾ.ಬಿ.ಎನ್.ರವೀಶ್

ಅಲ್ಜೈಮರ್ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿಗೆ ಕಾಣಿಸಿಕೊಳ್ಳುತ್ತಿದೆ. ವೃದ್ಧರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಯೀಗ ಮಧ್ಯವಯಸ್ಸಿಗರಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನಿಗಳ ಸಂಸ್ಥೆ ನಿರ್ದೇಶಕ ಡಾ.ಬಿ.ಎನ್.ರವೀಶ್ ತಿಳಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಜ್ಞಾನ ಉದ್ಯಾನ ಸಭಾಂಗಣದಲ್ಲಿ ಅಲ್ಜೈಮರ್ ಮತ್ತು ಸಂಬಂಧಿತ ಕಾಯಿಲೆಗಳ ಸಂಘವು ಹಮ್ಮಿಕೊಂಡಿದ್ದ 20ನೇ ವಾರ್ಷಿಕ ರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಎನ್.ರವೀಶ್ ಮಾತನಾಡಿದರು. ಅಲ್ಜೈಮರ್ ಕಾಯಿಲೆಯನ್ನು ಗುಣಪಡಿಸಲು ಸಾಕಷ್ಟು ಪ್ರಮಾಣದಲ್ಲಿ ಸಂಶೋಧನೆಗಳು ನಡೆಯಬೇಕಿದೆ. ಈ ಖಾಯಿಲೆಗೆ ಇಲ್ಲಿಯವರೆಗೂ ನಿರ್ದಿಷ್ಟ ಔಷಧವನ್ನು ಯಾರೂ ಸಂಶೋಧನೆ ಮಾಡಿಲ್ಲ. ಈ ರೋಗದ ಕುರಿತು ಜನರಲ್ಲಿ ನಿರಾಸಕ್ತಿ ಬೆಳೆದಿದ್ದು, ಮಧ್ಯವಯಸ್ಕರಲ್ಲೂ ಕಾಣಿಸಿಕೊಳ್ಳ ತೊಡಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್  ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಟಿ.ಎಸ್.ಸತ್ಯನಾರಾಯಣ ರಾವ್ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಇಂಗ್ಲೆಂಡಿನ ಅಲ್ಜೈಮರ್ ಕಾಯಿಲೆ ಸಂಸ್ಥೆಯ ಉಪಾಧ್ಯಕ್ಷ ಜೇಕಬ್ ರಾಯ್, ಸಂಘದ ರಾಷ್ಟ್ರ ಘಟಕದ ಅಧ್ಯಕ್ಷೆ ಮೀರಾ ಪಟ್ಟಾಭಿರಾಮನ್, ಸಂಘದ ಸ್ಥಳೀಯ ಆಯೋಜನಾ ಸಮಿತಿ ಅಧ್ಯಕ್ಷ ಡಾ.ಹನುಮಂತಾಚಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: