ದೇಶಮೈಸೂರು

ವರ್ದಾ ಚಂಡಮಾರುತ ಎದುರಿಸಲು ಕರಾವಳಿ ಪ್ರದೇಶಗಳು ಸಜ್ಜು

ಬಂಗಾಳಕೊಲ್ಲಿಯಿಂದ ‘ವರ್ದಾ’ ಚಂಡಮಾರುತವು ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದ್ದು ಇಂದು ಚೆನ್ನೈ ಹಾಗೂ  ಆಂಧ್ರ ಪ್ರದೇಶದ ನೆಲ್ಲೂರುಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.

insat_3101415fಈ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಚಂಡಮಾರುತವು ಸುಮಾರು 100 ಕಿಮೀ ವೇಗದಲ್ಲಿ ಬೀಸುತ್ತಿದ್ದು ತಮಿಳುನಾಡಿನ ಚೆನ್ನೈ, ಕಾಂಚೀಪುರಂ ಹಾಗು ತಿರುವಳ್ಳೂರುಗಳಲ್ಲಿ ಬಿರುಸಿನ ಮಳೆಯಾಗಲಿದೆ. ತಮಿಳುನಾಡು ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಚೆನ್ನೈ, ತಿರುವಳ್ಳೂರ್ರ, ಕಾಂಚೀಪುರಂನ ಶಾಲಾ ಕಾಲೇಜುಗಳಿಗೆ ರಜೆ ಘೋಸಿಷಲಾಗಿದ್ದು ಕರಾವಳಿಯಲ್ಲಿ ಮೀನುಗಾರರು ತೆರಳದಂತೆ ವಿಶೇಷ ಸೂಚನೆಯನ್ನುನೀಡಲಾಗಿದೆ. ಮುಜಾಗರೂಕ ಕ್ರಮವಾಗಿ ಎನ್.ಡಿ.ಆರ್ ಸಿಬ್ಬಂದಿಯನ್ನು ಕಡಲು ತಡಿಗಳಲ್ಲಿ ನಿಯೋಜಿಸಲಾಗಿದೆ.

Leave a Reply

comments

Related Articles

error: