ಪ್ರಮುಖ ಸುದ್ದಿ

ಕದನ ವಿರಾಮ ಹಿಂತೆಗೆದುಕೊಂಡ ಬಳಿಕ ಭಾರತೀಯ ಸೇನೆಯ ಮೊದಲ ಕಾರ್ಯಾಚರಣೆ: ನಾಲ್ವರು ಉಗ್ರರ ಹತ್ಯೆ

ದೇಶ(ನವದೆಹಲಿ)ಜೂ.19:- ರಂಜಾನ್ ಹಬ್ಬರ ಕದನ ವಿರಾಮ ಹಿಂತೆಗೆದುಕೊಂಡ ಬಳಿಕ ನಡೆದ ಭಾರತೀಯ ಸೇನೆ ತನ್ನ ಮೊದಲ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ನಡೆದ ಭಾರತೀಯ ಸೈನಿಕರು ಹಾಗೂ ಉಗ್ರರ ನಡುವಿನ ಎನ್‍ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ ಜೂನ್ 14 ರಂದು ಬಂಡಿಪೊರಾ ಜಿಲ್ಲೆಯಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 2 ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಭಾರತ ಸರ್ಕಾರ ರಂಜಾನ್ ಕದನ ವಿರಾಮ ಒಪ್ಪಂದವನ್ನು ಹಿಂಪಡೆಯುತ್ತಿದ್ದಾಗಿ ತಿಳಿಸಿ ಸೈನಿಕರಿಗೆ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿತ್ತು. ಸದ್ಯ ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರ ಗುರುತು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಉಗ್ರರು ಅಡಗಿರುವ ಶಂಕೆಯ ಮೇಲೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಸತತ 1,220 ಗಂಟೆಗಳ ರಂಜಾನ್ ಕದನ ವಿರಾಮದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಯತ್ನಿಸುವವರ ವಿರುದ್ಧ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೂಚನೆ ನೀಡಿದ್ದಾಗಿ ತಿಳಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: