ಮೈಸೂರು

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು : ಬೀರುವಿನಲ್ಲಿ ಇಡಲಾಗಿದ್ದ 4 ಲಕ್ಷ ರೂ.ದೋಚಿ ಪರಾರಿ

ಮೈಸೂರು,ಜೂ.19:- ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಬೀರುವಿನಲ್ಲಿ ಇಡಲಾಗಿದ್ದ 4 ಲಕ್ಷ ರೂ.ನಗದು, 83 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ತಿ.ನರಸೀಪುರ ಪಟ್ಟಣದ ಹೆಳವರಹುಂಡಿ ಗ್ರಾಮದಲ್ಲಿ ನಡೆದಿದೆ.

ಕೇಬಲ್ ರಾಜಶೇಖರ್ ಎಂಬವರ ಮನೆಯಲ್ಲಿದ್ದ ಯುವತಿಯೋರ್ವಳು ನಿದ್ರೆಗೆ ಜಾರಿದ ಸಂದರ್ಭ ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು  ಬೀರುವಿನ ಇಡಲಾಗಿದ್ದ ನಗದು ಹಾಗೂ ಚಿನ್ನವನ್ನು ಎಗರಿಸಿ ಪರಾರಿಯಾಗಿದ್ದಾರೆ.

ನಿದ್ರೆಯಿಂದ ಎಚ್ಚೆತ್ತ ಯುವತಿ ಬೀರುವಿನ ಬಾಗಿಲು ತೆಗೆದಿರುವುದನ್ನು ನೋಡಿದ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ತಿ.ನರಸೀಪುರ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕ ಕೆ.ಟಿ.ಚಂದ್ರಶೇಖರ್, ಸಬ್‍ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ, ಅಪರಾಧ ವಿಭಾಗದ ಎಸ್‍ಐ ಅಂದಾನಿ ನಾಯ್ಕ, ಎಎಸ್‍ಐ ಸಿದ್ದಯ್ಯ, ದಪೇದಾರ್ ಮಂಚಿಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: