ಕರ್ನಾಟಕ

ಸಿಎಂ ಕುರ್ಚಿ ಸಾಕು ಎಂಬ ಪದ ಕುಮಾರಸ್ವಾಮಿ ತುಟಿಯಂಚಿನಲ್ಲಿದೆ: ಶ್ರೀರಾಮುಲು ವ್ಯಂಗ್ಯ

ಮೊಳಕಾಲ್ಮುರು/ಚಿತ್ರದುರ್ಗ (ಜೂನ್ 19): ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ನಾನೇ 5 ವರ್ಷ ಸಿಎಂ ಎಂದು ಬೀಗುತ್ತಿದ್ದ ಕುಮಾರಸ್ವಾಮಿಯವರು ಈಗ ಒಂದು ವರ್ಷದವರೆಗೆ ನನ್ನ ಕುರ್ಚಿ ಭದ್ರ ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿಯನ್ನು ತಿಳಿಸುತ್ತದೆ. ಕುಮಾರಸ್ವಾಮಿಯವರ ವಿಶ್ವಾಸ ಐದು ವರ್ಷದಿಂದ ಒಂದು ವರ್ಷಕ್ಕೆ ಕುಸಿದಿರುವುದು ದುರದೃಷ್ಟಕರ ಎಂದು ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದವರು ಈಗ ಮೀನಮೇಷ ಎಣಿಸುತ್ತಿದ್ದಾರೆ  ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ನಾಟಕೀಯವಾಗಿ ಕಸರತ್ತು ನಡೆಯುತ್ತಿದ್ದೆ. ಇವರ ನಾಟಕ ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ. ಇನ್ನು ಆರು ತಿಂಗಳೊಳಗಾಗಿ ಮುಖ್ಯಮಂತ್ರಿ ಕುರ್ಚಿಯೇ ಸಾಕು ಎಂಬ ಮಾತು ಕುಮಾರಸ್ವಾಮಿಯವರ ಬಾಯಲ್ಲಿ ಬರಲಿದೆ. ಈ ಮಾತು ಅವರ ತುಟಿ ಅಂಚಿನಲ್ಲಿದೆ ಎಂದು ರಾಮುಲು ಅವರು ಕಟಕಿಯಾಡಿದರು. (ಎನ್.ಬಿ)

Leave a Reply

comments

Related Articles

error: