ಮೈಸೂರು

ಮೈಸೂರಿನ ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳತನ

ಮೈಸೂರಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳರು ತಮ್ಮ ಕೈ ಚಳಕವನ್ನು ಶನಿವಾರದಂದು ತೋರಿದ್ದು ಚಿನ್ನಾಭರಣ, ನಗದು ಸೇರಿದಂತೆ ವಿವಿಧ ಮೌಲ್ಯಯುತ ವಸ್ತುಗಳನ್ನು ದೋಚಿದ್ದಾರೆ.

ನಗರದ ಹೂಟಗಳ್ಳಿಯ ಬಿಜಿ ಬ್ಲಾಕ್ ನಿವಾಸಿ ದಿನೇಶ್ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದು ಅವರು ಊರಿನಲ್ಲಿ ಇಲ್ಲದೇ ಇರುವುದು ಮನವರಿಕೆಯಾದ ನಂತರ ಮನೆ ಬಾಗಿಲು ಮುರಿದು ಸುಮಾರು 58 ಇಂಚು ಎಲ್‍ಇಡಿ ಟಿವಿ, 8.5 ಗ್ರಾಂ ತೂಕದ ಚಿನ್ನಾಭರಣ, ದೋಚಿಸಿದ್ದಾರೆ. ದಿನೇಶ್ ಮನೆಗೆ ಹಿಂತಿರುಗಿ ಬಂದಾಗ ಈ ಕಳ್ಲತನ ಬಗ್ಗೆ ತಿಳಿಸಿದಿದ್ದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ನಂತರ ಪೊಲೀಸನವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ಬೋಗಾದಿಯ ರೂಪನಗರದಲ್ಲಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಬಿ.ವಿ.ನಾರಾಯಣಮೂರ್ತಿ ಅವರು ಪತ್ನಿಯೊಂದಿಗೆ ದೂರದ ಡೆಹರಾಡೂನ್‍ಗೆ ಹೋಗಿ ಶನಿವಾರ ಮನೆಗೆ ವಾಪಾಸ್ಸು ಆದಾಗ ಮನೆಯಲ್ಲಿ ಕಳ್ಳತನವಾದ ಬಗ್ಗೆ ಅರಿವಾಗಿದ್ದು,  ಮನೆಯ ಬಾಗಿಲನ್ನು ಮುರಿದ ಕಳ್ಳರು 20 ಸಾವಿರ ರೂಪಾಯಿ ಮೌಲ್ಯದ ವಸ್ತುಗಳಾದ ಕ್ಯಾಮರಾ, ಮೊಬೈಲ್, ಲೇಡಿಸ್ ಕೂಲಿಂಗ್ ಗ್ಲಾಸ್, ನಕಲಿ ಆಭರಣಗಳನ್ನು ಹಾಗೂ ಅಡುಗೆ ಹಾಗೂ ಸ್ನಾನಗೃಹದ ನಲ್ಲಿಗಳನ್ನು ದೋಚಿದ್ದಾರೆಂದು ನಾರಾಯಣಮೂರ್ತಿ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸಿನವರು ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

comments

Related Articles

error: