ಮೈಸೂರು

ಹನುಮಜಯಂತ್ಯೋತ್ಸವ : ಗಮನ ಸೆಳೆದ ಆಕರ್ಷಕ ಮೆರವಣಿಗೆ

maruti-2ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ 26ನೇ ವರ್ಷದ ಹನುಮ ಜಯಂತ್ಯೋತ್ಸವ ಶ್ರೀ ಮಾರುತಿ ಉತ್ಸವವನ್ನು ಉದ್ಘಾಟಿಸಲಾಯಿತು.

ನಂದಿಕಂಬ ಪೂಜೆ ಮತ್ತು ಮೆರವಣಿಗೆಯನ್ನು ಹೊಸಮಠದ ಚಿದಾನಂದ ಮಹಾಸ್ವಾಮಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಮಾರುತಿಯ ಭವ್ಯ ಉತ್ಸವಮೂರ್ತಿಯನ್ನು ಅಲಂಕೃತ ರಥದ ಮೇಲೆ ತರಲಾಯಿತು. ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಹೊರಟು ಅಶೋಕ ರಸ್ತೆ, ಇರ್ವಿನ್ ರಸ್ತೆ, ನ್ಯೂಸಯ್ಯಾಜಿರಾವ್ ರಸ್ತೆ, ಡಿ.ದೇವರಾಜು ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ ಎದುರು ರಸ್ತೆಯಿಂದ ಕನ್ನೇಗೌಡರ ಕೊಪ್ಪಲ ಮಾರ್ಗವಾಗಿ ತೆರಳಿ, ಕಾಂತರಾಜ ಅರಸು ರಸ್ತೆ ಮಾರ್ಗವಾಗಿ ಸರಸ್ವತಿಪುರಂ5ನೇ ಅಡ್ಡರಸ್ತೆಯಲ್ಲಿ ತಿರುವು ಪಡೆದು ಸಾಹುಕಾರ್ ಚೆನ್ನಯ್ಯ ರಸ್ತೆಯ ಮೂಲಕ ದೇವಸ್ಥಾನದ ಆವರಣಕ್ಕೆ ತಲುಪಲಿದೆ.

ಉತ್ಸವದಲ್ಲಿ ನಂದಿಕಂಬ, ಬೀಸುಕಂಸಾಳೆ, ವೀರಗಾಸೆ, ಡೊಳ್ಳುಕುಣಿತ, ಕೀಲುಕುದುರೆ ತಂಡ, ಮರಗಾಲು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆಯ ಮೇಳ, ಸುತ್ತೂರು ಕಹಳೆ ತಂಡ, ತಮಟೆ, ನಗಾರಿ ಮೇಳ, ಜಡೆ ಕೋಲಾಟ, ಕಂಸಾಳೆ,  ಕರಗದ ಕೋಲಾಟ, ಕರಗದ ನೃತ್ಯ, ಕೊರವಂಜಿ ಕೋಲಾಟ,  ಹನ್ನೆರಡು ಸೆರಗಿನ ಕುಣಿತ, ದೊಣ್ಣೆವರಸೆ, ಬಿಜಲಿ ನೃತ್ಯ, ಒನಕೆ ನೃತ್ಯ, ಉಮ್ಮತ್ತಾಟ, ಬಳುಕಾಟ, ಹಲಗೆ ಮೇಳ  ಅಂಗಧೀರರು, ಪಟಾ ಕುಣಿತ, ದಾಸಯ್ಯ ಜೋಗಯ್ಯಗಳ ಪರಾಕು ತಂಡ, ಯಕ್ಷಗಾನ, ಹುಲಿವೇಷ, ಗೊರವರ ಕುಣಿತ, ಪಂಜಿನ ಕುಣಿತ, ಬಾನಕಿ ಶಂಖ ಜಾಗಟೆ ತಂಡ, ವೀರಮಕ್ಕಳ ಕುಣಿತ, ವೀರಗಾಸೆ, ಶ್ರೀಸಿದ್ದರಾಮೇಶ್ವರ ಪೂಜಾ ತಂಡ, ಮೈಸೂರು ಅರಮನೆ ಬಿರುದು ಬಾವಲಿಗಳು, ಸೋಬಾನೆ ಮುಂತಾದ ತಂಡಗಳ ಆಕರ್ಷಕ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಕಂಡು ಬರುತ್ತಿದೆ.

ಸಹಸ್ರಾರು ಜನರು ಈ ವೈಭವೋಪೇತ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

Leave a Reply

comments

Related Articles

error: