ಕರ್ನಾಟಕದೇಶ

ನೆಲಮಂಗಲ-ಹಾಸನ ಮಾರ್ಗ ಸೇರಿ ರಾಜ್ಯದ ರಸ್ತೆಗಳು ಮೇಲ್ದರ್ಜೆಗೆ: ಕೇಂದ್ರಕ್ಕೆ ಮುಖ್ಯಮಂತ್ರಿ ಮನವಿ

ನವದೆಹಲಿ (ಜೂನ್ 19): ರಾಜ್ಯದಲ್ಲಿರುವ ಹಲವು ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

ನೆಲಮಂಗಲ-ಹಾಸನ ಹೆದ್ದಾರಿ, ತುಮಕೂರು-ಶಿವಮೊಗ್ಗ ರಸ್ತೆ ಅಗಲೀಕರಣ, ಬೆಳಗಾವಿ ಒಆರ್‌ಆರ್ ಮತ್ತು ಸಾಗರ-ಸಿಗಂದೂರು ರಸ್ತೆ ಅಭಿವೃದ್ಧಿಗಳು ಸೇರಿವೆ. ಕೇಂದ್ರ ಹೆದ್ದಾರಿ ಸಚಿವಾಲಯ ರಾಜ್ಯಕ್ಕೆ 34 ಸಾವಿರ ಕೋಟಿ ರೂಪಾಯಿಯ ಹೆದ್ದಾರಿ ಯೋಜನೆಗೆ ಅನುಮೋದನೆ ನೀಡಿದೆ. ರಾಜ್ಯ ಸಲ್ಲಿಸಿರುವ ಪ್ರಸ್ತಾವನೆಗೆ 570 ಕೋಟಿ ರೂಪಾಯಿ ಜಾರಿ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. (ಎನ್.ಬಿ)

Leave a Reply

comments

Related Articles

error: