ಮೈಸೂರು

ಮಹಿಳೆ ನೇಣಿಗೆ ಶರಣು

ಗಂಡ ಹೆಂಡತಿಯ ನಡುವಿನ ವೈಮನಸ್ಸು ಹೆಂಡತಿ ನೇಣಿಗೆ ಶರಣಾಗುವುದರೊಂದಿಗೆ ಕೊನೆಯಾದ ಘಟನೆ ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೇಣಿಗೆ ಶರಣಾದ ಮಹಿಳೆಯನ್ನು ಬ್ಯಾಟಳ್ಳಿ ನಿವಾಸಿ ರಾಧ(26) ಎಂದು ಗುರುತಿಸಲಾಗಿದೆ. ಈಕೆಯನ್ನು ಗಾಂಧಿನಗರದ ಸತೀಶ್ ಎಂಬಾತನಿಗೆ ಕಳೆದ ಎಂಟು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಗಂಡ ಹೆಂಡತಿಯರಲ್ಲಿ ಸಾಮರಸ್ಯವಿರಲಿಲ್ಲ. ಅದರಿಂದಾಗಿ ಅವರಲ್ಲಿ ಪದೇ ಪದೇ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಮೈಸೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸರು ರಾಧಾ ಪತಿ ಸತೀಶ್ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

 

Leave a Reply

comments

Related Articles

error: