ಮೈಸೂರು

ರೇಸ್ ಕೋರ್ಸ್ ಸ್ಥಳಾಂತರಿಸದೇ ಯಥಾಸ್ಥಿತಿ ಕಾಪಾಡಲು ಒತ್ತಾಯ

ಮೈಸೂರು,ಜೂ.19 : ನಗರದ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ಜಾಗವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಎಂ.ಆರ್.ಅಶೋಕ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರೇಸ್ ಕೋರ್ಸ್ ಅನ್ನು ನಗರದಿಂದ ಸುಮಾರು 20 ಕಿಮಿ ದೂರದಲ್ಲಿರುವ ಸರ್ಕಾರಿ ಜಮೀನಿಗೆ ಸ್ಥಳಾಂತರಿಸಿ, ಆ ಸ್ಥಳದಲ್ಲಿ ಊಟಿಯಲ್ಲಿರುವ ಬಟಾನಿಕಲ್ ಗಾರ್ಡನ್ ಮಾದರಿಯಂತೆ ಉದ್ಯಾನವನ ಅಭಿವೃದ್ಧಿಪಡಿಸುವ ಬಗ್ಗೆ ಶಾಸಕ ಸಾ.ರಾ.ಮಹೇಶ್ ನೀಡಿರುವ ಪತ್ರಿಕಾ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ನಗರವಾದ ಮೈಸೂರಿಗೆ ಅದರದೇ ಆದ ಘನತೆಯಿದ್ದು, ರಾಜ-ಮಹಾರಾಜರು ಸುಮಾರು ನೂರಾರು ವರ್ಷಗಳ ಹಿಂದೆಯೇ (1904) ಈ ಸ್ಥಳವನ್ನು ಜಮ್ ಖಾನ್ ಕ್ಲಬ್ ಗೆ ನಿರ್ಮಿಸಿದ್ದು ಇಲ್ಲಿ ರೇಸ್ ಕೋರ್ಸ್ ಆಗಿದೆ. ಅಲ್ಲದೆ, ಚಾಮುಂಡಿ ಬೆಟ್ಟದ ಸುತ್ತಮುತ್ತಲ ಪ್ರದೇಶ ಅರಣ್ಯ ವಲಯ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ರಾಜ್ಯ ಸರ್ಕಾರ ಇದರ ನಿರ್ವಹಣೆ ನಡೆಸುತ್ತಿದೆ ಅಷ್ಟೇ.

ಅಲ್ಲದೇ ಬಟಾನಿಕಲ್ ಗಾರ್ಡನ್ ನಿರ್ಮಿಸುವ ಬದಲಾಗಿ, ರಾಜಮಹಾರಾಜರ ಸಮಾಧಿಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ಅದರ ಹೊರತಾಗಿ ರೇಸ್ ಕೋರ್ಸ್ ಅನ್ನು ಯಥಾ ಸ್ಥಳದಲ್ಲಿ ಮುಂದುವರೆಸುವ ಮೂಲಕ ನಗರದ ಪಾರಂಪರಿಕ ಸೌಂದರ್ಯವನ್ನು ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: