ಸುದ್ದಿ ಸಂಕ್ಷಿಪ್ತ

ನಾಳೆ ಕನ್ನಡ ಕಲಿಕಾ ಶಿಬಿರ

ಮೈಸೂರು,ಜೂ.19 : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಸಂಪನ್ಮೂಲ ಕೇಂದ್ರ, ಸಿಎಫ್ ಟಿ ಆರ್ ಐನ  ಕನ್ನಡ ಸಹೃದಯ ಬಳಗ ಸಂಯುಕ್ತವಾಗಿ ಕನ್ನಡ ಕಲಿಕಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದ ಉದ್ಘಾಟನೆಯು ಜೂ.20ರ ಸಂಜೆ 4ಕ್ಕೆ ಲಿಪಿಡ್ ಸೈನ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಸಿಎಫ್ ಟಿ ಆರ್.ಐ ನ ಮುಖ್ಯ ವಿಜ್ಞಾನಿ, ಸಲಹೆಗಾರ ಡಾ.ಆರ್.ಸುಬ್ರಮಣಿಯನ್ ಉದ್ಘಾಟಿಸುವರು, ಕನ್ನಡ ಸೃಹದಯ ಬಳಗದ ಡಾ.ಕೆ.ವೆಂಕಟೇಶ್ ಮೂರ್ತಿಯವರಿಂದ ಆಶಯ ಬಾಷಣ, ಬಳಗದ ಅಧ್ಯಕ್ಷ ರಂಗಧಾಮಯ್ಯ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕಾರಾಮ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: