ಕರ್ನಾಟಕ

ಟಾಟಾ ಏಸ್ ವಾಹನದ ಮೇಲೆ ಉರುಳಿದ ಮರ : ಕಾರ್ಮಿಕ ಸಾವು

ರಾಜ್ಯ(ಮಡಿಕೇರಿ)ಜೂ.20:-  ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ  ಸಿಲ್ವರ್ ಮರ ಬಿದ್ದು ಕಾರ್ಮಿಕರೋರ್ವರು ಸಾವನಪ್ಪಿದ್ದು, ಮೂರು ಜನರು ಗಂಭೀರ ಗಾಯಗೊಂಡ ಘಟನೆ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.

ಮೃತರನ್ನು ಅನುಗೋಡು ನಿವಾಸಿ ರಾಜು (35) ಎಂದು ಗುರುತಿಸಲಾಗಿದ್ದು, ಪಾಲಿಬೆಟ್ಟ ಹೊಸಳ್ಳಿ ಎಂಬ ಜಾಗದಲ್ಲಿ ತೋಟದ ಕೆಲಸ ಮುಗಿಸಿ ಅನುಗೋಡುವಿನ ತಮ್ಮ ಊರಿಗೆ ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸಿಲ್ವರ್ ಮರ ಬಿದ್ದು, ಸಾವನಪ್ಪಿದ್ದಾರೆ. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಸಮೀಪವೇ ಕುಳಿತಿದ್ದ ಇವರ ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್‍ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.

Leave a Reply

comments

Related Articles

error: