ಕರ್ನಾಟಕ

ವಾಟರ್ ಮ್ಯಾನ್ ಕೆಲಸಕ್ಕೆ ಸುಳ್ಳು ದಾಖಲೆ ನೀಡಿರುವ ಬಗ್ಗೆ ಆರ್‍ಟಿಐ ಯಲ್ಲಿ ಕೇಳಿದ್ದಕ್ಕೆ ಹಲ್ಲೆ

ರಾಜ್ಯ(ಹಾಸನ)ಜೂ.20:-  ವಾಟರ್ ಮ್ಯಾನ್ ಕೆಲಸಕ್ಕೆ ಸುಳ್ಳು ದಾಖಲೆ ನೀಡಿರುವ ಬಗ್ಗೆ ಮಾಹಿತಿ ಹಕ್ಕು ಕಾಯಿದೆ (ಆರ್‍ಟಿಐ) ಯಲ್ಲಿ ಸತ್ಯ ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕೊಲೆ ಬೆದರಿಕೆ ಹಾಕಲಾಗಿದ್ದು, ನಮಗೆ ನ್ಯಾಯ ಕೊಡಿಸಬೇಕೆಂದು ಗಾಯಳು ಸುರೇಶ್ ಆಗ್ರಹಿಸಿದ್ದಾರೆ.

ಅರಕಲಗೂಡು ತಾಲೂಕು ಹುಲ್ಲಂಗಾಲ ಗ್ರಾಮದಲ್ಲಿ ಹೊಂಬೇಗೌಡ ಉರ್ ತಮ್ಮೇಗೌಡ ಎಂಬುವರು ಸುಳ್ಳು ಟಿಸಿ ಇತರೆಯನ್ನು ನೀಡಿ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಕೆಲಸ ಪಡೆದಿದ್ದರು. ಇದನ್ನು ಖಂಡಿಸಿ ಮಾಹಿತಿ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ್ದು, ಶಿಕ್ಷಣ ಪಡೆದ ಟಿಸಿಯ ವರ್ಷವನ್ನೇ ತಿದ್ದುಪಡಿ ಮಾಡಿ ಕೆಲಸಕ್ಕೆ ಸೇರಲು ದಾಖಲೆ ಕೊಡಲಾಗಿದೆ. ಹೊಂಬೇಗೌಡರ ಮಗ ಮಂಜುನಾಥ್ ಎಂಬುವರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈತ ಕೂಡ ವಕೀಲ ವೃತ್ತಿಗೆ ಬರುವ ಮೊದಲು ಕಾಲೇಜಿನಲ್ಲಿ ತಾನು ಪರೀಕ್ಷೆ ಬರೆಯದೆ ಮತ್ತೊಬ್ಬರ ಕೈಲಿ ಬರೆಯಿಸಿ ಪಾಸ್ ಆಗಿರುವ ಬಗ್ಗೆ ಕೋರ್ಟಿನಲ್ಲೆ ಅರ್ಜಿ ಹಾಕಲಾಗಿದೆ ಎಂದು ದೂರಿದರು. ತಾನು ಕೆಎಸ್‍ಆರ್‍ಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. 2018 ಏಪ್ರಿಲ್ 18 ರಂದು ಹೊಂಬೇಗೌಡ ಮತ್ತು ಮಗನಾದ ಮಂಜುನಾಥ್ ಇಬ್ಬರೂ ನಮ್ಮ ಸುಳ್ಳು ದಾಖಲೆ ಹೊರ ಬಂದು ಸತ್ಯಾಂಶ ಹೊರ ಬರುತ್ತದೆ ಎಂದು ಹೆದರಿ, ನಾನು ಇಲ್ಲದ ವೇಳೆ ಮನೆಗೆ ನುಗ್ಗಿ ನನ್ನ ತಾಯಿ ಲಕ್ಷ್ಮಮ್ಮ ಮೇಲೆ ಹಲ್ಲೆ ಮಾಡಿದಲ್ಲದೇ ಮನೆ ಒಳಗಿದ್ದ ಟಿವಿ ಇತರೆ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಜೊತೆಗೆ ಆರ್‍ಟಿಐ ಯಲ್ಲಿ ಕೇಳಿದ ದಾಖಲೆ ಎಲ್ಲ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಜೂ. 16ರ ಶನಿವಾರ ಬೆಳಿಗ್ಗೆ 9.30ಕ್ಕೆ ಹುಲ್ಲಂಗಾಲ ಗ್ರಾಮದ ಶ್ರಿ ಆಂಜನೇಯ ದೇವಸ್ಥಾನದ ಬಳಿ ಹೊಂಬೇಗೌಡ ಮತ್ತು ಮಗನಾದ ಮಂಜುನಾಥ್ ಮತ್ತು ಇತನ ತಾಯಿ ನಾಗರತ್ನ ಮೂವರು ಸೇರಿ ನನ್ನನ್ನು ಅಡ್ಡಗಟ್ಟಿ ಹೊಡೆದು ನನ್ನ ಬಳಿ ಇದ್ದ ದಾಖಲೆಯನ್ನು ಕೂಡ ಕಸಿದುಕೊಂಡು ಹೋಗಿದ್ದಾರೆ. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ವಿಜಯಭಾರತೀ ಎಂಬುವರು ಮುಂದೆ ಬಂದು ನನ್ನನ್ನು ಉಳಿಸಿದರು. ಈ ಬಗ್ಗೆ ಅರಕಲಗೂಡಿನಲ್ಲಿ ಪೊಲೀಸರಿಗೆ ದೂರು ನೀಡಿದರೂ ನಮ್ಮ ಮೇಲೆ ಮೂರು ಪ್ರಕರಣ ದಾಖಲಿಸಿದ್ದಾರೆ. ಅವರು ನನ್ನನ್ನು ಉಳಿಸಲು ತುರ್ತು ವಾಹನಕ್ಕೆ ಕರೆ ಮಾಡಿ ನನ್ನ ಕಾಪಾಡಿದ ವಿಜಯಭಾರತೀ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಅವರದು ಯಾವ ತಪ್ಪು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ತಮ್ಮ ಅಳಲು ತೋಡಿಕೊಂಡರು. ಅರಕಲಗೂಡಿನ ಸಬ್ ಇನ್ಸಪೆಕ್ಟರ್ ಮಧು ಎಂಬುವರು ಹೊಂಬೇಗೌಡ ಮಗನ ಜೊತೆ ಶಾಮೀಲಾಗಿ, ನನ್ನ ಮೇಲೆ ಮೂರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ನನ್ನ ಬಳಿ ಮೊಬೈಲ್‍ನಲ್ಲಿ ಇದ್ದ ದಾಖಲೆಯನ್ನೆಲ್ಲಾ ಡಿಲಿಟ್ ಮಾಡಿದ್ದಾರೆ ಎಂದು ದೂರಿದರು. ಈ ಬಗ್ಗೆ ಸೂಕ್ತ ತನಿಖೆ ಮಾಡಿ ನನಗೆ ನ್ಯಾಯ ಕೊಡಿಸಬೇಕು. ಜೊತೆಗೆ ಕೊಲೆ ಬೆದರಿಕೆ ಇರುವುದರಿಂದ ರಕ್ಷಣೆ ಕೊಡಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: