ಮೈಸೂರು

ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀಹನುಮ ಜಯಂತಿ

ಮೈಸೂರಿನ ಹಲವೆಡೆ ಶ್ರೀಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜಯಂತಿಯಂಗವಾಗಿ ನಗರದ ಶ್ರೀ ಹನುಮಾನ್ ಘಡಿ ಸೇವಾ ಸಮಿತಿಯಿಂದ ಅಗ್ರಹಾರದ ವಾಣಿವಿಲಾಸ ವಾಣಿಜ್ಯ ಮಾರುಕಟ್ಟೆಯ ಸಂಕೀರ್ಣದಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತಾಧಿಗಳು ಹನುಮಾನ್ ಚಾಲೀಸ್ ಪಠಣ, ವಿಜಯ ಮಹಾಮಂತ್ರ ಜಪಾನುಷ್ಠಾನ, ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿದರು.

ಕಳೆದ ಐದು ವರ್ಷಗಳಿಂದಲೂ ಸಮಿತಿಯರವರು ಹನುಮಾನ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಲಿದ್ದು ಇದರಂಗವಾಗಿ ಇಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಯೋಗಿಸಲಾಯಿತು. ನ್ಯಾಯವಾದಿ ಹಾಗೂ ಆರ್‍.ಎಸ್.ಎಸ್ ಪ್ರಾಂತ್ಯ ಸಂಚಾಲಕ ಸಿ.ಕೇಶವಮೂರ್ತಿ, ಪ್ರಧಾನ ಸಂಚಾಲಕ ರಾಜೇಶ್ ಘಡಿ, ರಮೇಶ್, ಅರವಿಂದ್ ಶರ್ಮಾ, ಶಿವಕೇಶವ ಮೂರ್ತಿ, ಯಶಸ್ವಿನಿ ಸೋಮಶೇಖರ್ ಹಾಗೂ ಇತರರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: