ಮೈಸೂರು

ಆ್ಯಕ್ಟಿವಾಗೆ ಗುದ್ದಿದ ಬಸ್: ಚಾಲಕಿ ಸಾವು

ಕೆ.ಎಸ್.ಆರ್.ಟಿ.ಸಿ. ಬಸ್ ಗುದ್ದಿದ ಪರಿಣಾಮ ಆ್ಯಕ್ಟಿವಾ ಚಾಲಕಿ ಕೆಳಕ್ಕುರುಳಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಬೆಂಗಳೂರು ಮೂಲದ ಮೈಸೂರಿನ ಹೆಚ್.ಜಿ.ಎಸ್.ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರಲಕ್ಷ್ಮಿ ಕೆ.ಆರ್(35) ಎಂದು ಗುರುತಿಸಲಾಗಿದೆ.

ವರಲಕ್ಷ್ಮಿ ಕುವೆಂಪುನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇರ್ವಿನ್ ರಸ್ತೆಯ ಮೂಲಕ ಮನೆಗೆ ತಮ್ಮ ಆ್ಯಕ್ಟಿವಾ ಗಾಡಿಯಲ್ಲಿ ಸಾಗುತ್ತಿದ್ದರು. ಇದೇ ವೇಳೆ ಬಸ್ ನಿಲ್ದಾಣದಿಂದ ರೈಲ್ವೆಸ್ಟೇಶನ್ ಕಡೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಆ್ಯಕ್ಟಿವಾಕ್ಕೆ ಗುದ್ದಿದ ಪರಿಣಾಮ ಅವರು ಕೆಳಕ್ಕುರುಳಿದ್ದಾರೆ. ಬಸ್ ನ ಚಕ್ರ ತಲೆಯ ಮೇಲೆ ಹರಿದಿದ್ದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಎನ್.ಆರ್. ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Leave a Reply

comments

Related Articles

error: