ಮೈಸೂರು

ಸರಕು ಸಾಗಣೆ ಲಾರಿ ಮುಷ್ಕರದಿಂದ ದೂರ ಉಳಿದ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ

ಮೈಸೂರು,ಜೂ.20 : ಪೆಟ್ರೋಲ್ ಬೆಲೆ ಏರಿಕೆ, ಥರ್ಡ್ ಪಾರ್ಟಿ ಜೀವವಿಮೆ, ಟೋಲ್ ಶುಲ್ಕ ಖಂಡಿಸಿ ಕಳೆದ ಜೂ.18ರಿಂದ  ದೇಶದಾದ್ಯಂತ ನಡೆಸುತ್ತಿರುವ ಸರಕು ಸಾಗಾಣಿಕೆ ಲಾರಿ ಮುಷ್ಕರದಿಂದ ದೂರ ಉಳಿದಿರುವುದಾಗಿ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘವು ಪ್ರಕಟಿಸಿದೆ.

ರಾಜ್ಯದಲ್ಲಿ ಷಣ್ಮುಗಪ್ಪ ಹಾಗೂ ಚನ್ನಾರೆಡ್ಡಿಯವರ ಎರಡು ಬಣಗಳಿದ್ದು, ಪ್ರತಿ ಬಾರಿಯೂ ಈ ಬಣಗಳಿಂದ ಕರೆ ನೀಡುವ ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದೇವೆ, ಆದರೆ ಕೆಲವೇ ಬೇಡಿಕೆಗಳು ಈಡೇರಿದರೂ ಸಹ ಮುಷ್ಕರವನ್ನು ಹಿಂಪಡೆಯುವ ಈ ಬಣಗಳಿಂದ ಅಂತರ ಕಾಯ್ದುಕೊಳ್ಳುವುದಾಗಿ ನಿರ್ಧರಿಸಿದ್ದು ಆದ್ದರಿಂದ ಈ ಬಾರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ ಯಾವುದೇ ವಿಷಯ ಸಂಬಂಧವಾಗಿ ಆ ಸಂಘಗಳು ತಮ್ಮನ್ನು ಇದುವರೆಗೂ ಸಂಪರ್ಕಿಸಲ್ಲದ ಕಾರಣ, ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ, ಆದ್ದರಿಂದ ಈ ಬಣಗಳು ತಮ್ಮೊಂದಿಗೆ ಚರ್ಚೆ ನಡೆಸದೆ ಮುಷ್ಕರ ನಡೆಸುತ್ತಿದ್ದು ಆದ್ದರಿಂದ ಬೆಂಬಲ ಸೂಚಿಸುವುದಿಲ್ಲವೆಂದು ಕಾರ್ಯದರ್ಶಿ ಅಬ್ದುಲ್ ಖಾದರ್ ಘೋಷಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: