ಕರ್ನಾಟಕ

ನಗರಸಭೆ ಅಧ್ಯಕ್ಷರಾದ ಹೊಸಹಳ್ಳಿ ಬೋರೇಗೌಡ ನಿಧನ

ರಾಜ್ಯ(ಮಂಡ್ಯ)ಜೂ.21:- ಮಂಡ್ಯ ನಗರಸಭೆ ಅಧ್ಯಕ್ಷರಾದ ಹೊಸಹಳ್ಳಿ ಬೋರೇಗೌಡ ಅವರು (52) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ನಿನ್ನೆ ರಾತ್ರಿ ಮಲಗಿದ ಅವರು ಬೆಳಿಗ್ಗೆ ಮೇಲೇಳಲೇ ಇಲ್ಲ ಎನ್ನಲಾಗಿದ್ದು, ನಿದ್ರೆಯಲ್ಲಿರುವಾಗಲೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ನಿಧನ ಹಿನ್ನೆಲೆಯಲ್ಲಿ ನಗರದ ಪ್ರಥಮ ಪ್ರಜೆಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಜನರು ಆಗಮಿಸುತ್ತದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರೋ ಹೊಸಹಳ್ಳಿ ಬೋರೇಗೌಡ ನಿಧನಕ್ಕೆ ಜನತೆ ಕಂಬನಿ ಮಿಡಿದಿದ್ದಾರೆ. ಹೈದರಾಬಾದ್ ಪ್ರವಾಸಕ್ಕೆ ತೆರಳಿರುವ ಹೊಸಹಳ್ಳಿ ಬೋರೇಗೌಡ ಅವರ ಕುಟುಂಬಿಕರು ಮಧ್ಯಾಹ್ನ 2 ಗಂಟೆಯಷ್ಟರಲ್ಲಿ ನಗರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಪ್ರವಾಸಕ್ಕೆಂದು ಎರಡು ದಿನದ ಹಿಂದೆ ತೆರಳಿದ್ದರು. ಇಂದು ಸಂಜೆ ಅಥವಾ ನಾಳೆ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: