ಮೈಸೂರು

ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲ

ಮೈಸೂರು,ಜೂ.21 : ಸಚಿವ ಜಮೀರ್ ಅಹ್ಮದ್ ಅವರು ಶಾಸಕ ತನ್ವೀರ್ ಸೇಠ್ ವಿರುದ್ಧ ನೀಡಿರುವ ಹೇಳಿಕೆಯಿಂದ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ ಎಂದು ಅಜಿತ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ತಿಳಿಸಿದರು.

ಜೆಡಿಎಸ್ ನಿಂದ ವಲಸೆ ಬಂದು ಸ್ವತಃ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದು, ತಮ್ಮದೇ ಪಕ್ಷದ ಮಾಜಿ ಸಚಿವ ತನ್ವೀರ್ ಸೇಠ್ ವಿರುದ್ಧ ಮಾತನಾಡುವುದು ಕಂಡರೆ ಸಚಿವ ಜಮೀರ್ ಅಹ್ಮದ್ ಕಾಂಗ್ರೆಸ್ ಚಿನ್ಹೆಯಿಂದ ಗೆದ್ದಿರುವುದು ಮರೆತಂತೆ ಬಾಸವಾಗಿದ್ದು ಇದರಿಂದ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ತನ್ವೀರ್ ಸೇಠ್ ಅವರನ್ನು ಸೋಲಿಸಲು ಹಿಂಬಾಲಕರ ಮೂಲಕ ಜಮೀರ್ ಅಹ್ಮದ್ ಅವರು ಯತ್ನಿಸಿದ್ದಾರೆ, ಈ ಬಗ್ಗೆ ಹಲವಾರು ಸಾಕ್ಷಿಯಾಧಾರಗಳಿವೆ, ಕಾಂಗ್ರೆಸ್ ವಿರೋಧಿಯಾಗಿ ಪ್ರತ್ಯೇಕ ವಾದ ಮಾಡುತ್ತಿರುವ ಜಮೀರ್ ಅಹ್ಮದ್ ಅವರ ನಡೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ಗೊಂದಲಗಳು ಉಂಟಾಗಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಪರಮೇಶ್ವರ ಅವರು ಎಲ್ಲಾ ವಿವಾದಗಳಿಗೆ ತೆರೆ ಏಳೆಯಲು ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಅಜಿತ್ ಸೇಠ್ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಚಿಂತಾಯಮ್ಮ, ಎಂ.ಡಿ.ವೆಂಕಟೇಶ್, ರಂಗಯ್ಯ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: