ಕ್ರೀಡೆ

ಯಶ್ ಆರಾಧ್ಯ ಮತ್ತೊಂದು ದಾಪುಗಾಲು

ರಾಜ್ಯ(ಬೆಂಗಳೂರು) ಜೂ, 21:-  13 ಚಾಂಪಿಯನ್‍ಷಿಪ್‍ನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದು, 52 ರೇಸುಗಳಲ್ಲಿ ವೇದಿಕೆ ಏರಿದ ಗೌರವದ ಜೊತೆ 6 ವರ್ಷದಲ್ಲಿ 11 ಪ್ರಶಸ್ತಿ, ಈಗ ಫಾರ್ಮುಲಾ ಬಿಎಂಡಬ್ಲ್ಯು ಹಾಗೂ ಫಾರ್ಮುಲಾ 1600 ಪ್ರವೇಶಿಸಿದ್ದಾರೆ ಯಶ್ ಆರಾಧ್ಯ.

ಬಹುರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ ಸುಮಾರು 6  ವರ್ಷ ಗೋ ಕಾರ್ಟಿಂಗ್‍ನಲ್ಲಿ ಪ್ರಾಬಲ್ಯ ಹೊಂದಿದ್ದ, ಜೆ.ಕೆ ಟೈರ್ ನ್ಯಾಷನಲ್ ಚಾಂಪಿಯನ್‍ಷಿಪ್‍ನಲ್ಲಿ ಸ್ಪರ್ಧಿಸಿದ ಮೊದಲ ಬಾರಿಯೇ ನ್ಯಾಷನಲ್ ಚಾಂಪಿಯನ್ (ರೂಪಿ) ಕಿರೀಟ ಧರಿಸಿದ ಯಶ್ ಆರಾಧ್ಯ ಬೆಂಗಳೂರು ಬಾಲಕ. ಈತ ಬಿಷಪ್ ಕಾಟನ್ಸ್ ಬಾಯ್ಸ್ ಸ್ಕೂಲ್ ವಿದ್ಯಾರ್ಥಿ. ಟೀಂ ಎಂಸ್ಪೋರ್ಟ್ ರೇಸರ್. ಈಗ ಯಶ್ ಇನ್ನೂ ದೊಡ್ಡ ಲೀಗ್‍ನಲ್ಲಿ ತನ್ನ ಸಾಮರ್ಥ್ಯ ಪರೀಕ್ಷಿಸಲಿದ್ದಾರೆ.

ಪ್ರತಿಷ್ಠಿತ ಜೆಕೆ ಟೈರ್ ಫಾರ್ಮುಲಾ 4ಬಿಎಂಡಬ್ಲ್ಯು-ಎಫ್‍ಬಿ02 ಸ್ಪರ್ಧೆಯಲ್ಲಿ ಭಾಗವಹಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಜೆಕೆ ಬಿಎಂಡಬ್ಲ್ಯು ಟೈರ್ಸ್ ನಡೆಸಿದ ಅನೇಕ ರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ ಗೆಲುವು ಸಾಧಿಸಿರುವುದರಿಂದ ಸ್ಕಾಲರ್‍ಷಿಪ್ ಡ್ರೈವ್ ಪಡೆದಿದ್ದಾರೆ. ಅಲ್ಲದೆ ಎಂಆರ್‍ಎಫ್ ಫಾರ್ಮುಲಾ 4:1600, 2018 (ಬಾಲಕನ 7ನೇ ಋತು) ಭಾಗವಹಿಸಲು ಜೆಎ ಮೋಟಾರ್ ಸ್ಪೋರ್ಟ್ಸ್ ಜತೆ ಸಹಿ ಹಾಕಿದ್ದಾರೆ. ಇದೆಲ್ಲದರಲ್ಲೂ ಇವರಿಗೆ ಮಾರ್ಗದರ್ಶಕ ಅಕ್ಬರ್ ಇಬ್ರಾಹಿಂ ಹಾಗೂ ಎಂಸ್ಪೋರ್ಟ್.

ಮುಂಬರುವ ಋತುವಿಗೆ ಸಜ್ಜಾಗಲು ಯಶ್ ಇತ್ತೀಚೆಗೆ ಕೊಯಮತ್ತೂರಿನಲ್ಲಿ ಫಾರ್ಮುಲಾ 4:1600 ಚಾಲನೆಯನ್ನು ಆರ್ಮಾನ್ ಇಬ್ರಾಹಿಂ ಮತ್ತು ಆದಿತ್ಯ ಪಟೇಲ್ ಅವರ ಹದ್ದಿನಗಣ್ಣಿನಡಿ ನಡೆಸಿದರು. ಯಶ್ ಇದೇ ಮೊದಲ ಬಾರಿಗೆ ಈ ರೇಸಿಂಗ್ ಕಾರನ್ನು ಚಾಲನೆ ಮಾಡಿದರು. ಅದಕ್ಕೆ ಬೇಗನೆ ಹೊಂದಿಕೊಂಡರು. ಚಿಕ್ಕ ವಯಸ್ಸಿನಿಂದಲೂ ಯಶ್‍ಗೆ ಗುರು ಆಗಿರುವ ಆರ್ಮಾನ್  ಈ ಕುರಿತು ಪ್ರತಿಕ್ರಿಯಿಸಿ ‘ಯಶ್ ಮೋಟಾರ್ ಸ್ಪೋರ್ಟ್ ವೃತ್ತಿಜೀವನ ಆರಂಭ ಮಾಡಿದ ದಿನದಿಂದ ನಮ್ಮ ತಂಡದೊಂದಿಗೆ ಇದ್ದಾರೆ. ನಮ್ಮ ತಂಡ ಅವರಿಗಾಗಿ ಹಂತಹಂತದ ಕಾರ್ಯಕ್ರಮ ರೂಪಿಸಿದೆ.  ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಯಶ್ ಶ್ರಮಜೀವಿ. ಗಮನ ಹರಿಸುವ ಬಾಲಕ. ಈ ಋತುವಿನಲ್ಲಿ ಸಹ ಗುರಿ ತಲುಪಲು ಅವರು ಶ್ರಮಿಸುತ್ತಾರೆ ಎಂದಿದ್ದಾರೆ.

ಈ ಚಾಂಪಿಯನ್‍ಷಿಪ್‍ಗಳನ್ನು ಗಮನದಲ್ಲಿಟ್ಟುಕೊಂಡೇ ಯಶ್, ಶಾಲಾ ರಜಾ ದಿನಗಳನ್ನು ಅಭ್ಯಾಸಕ್ಕಾಗಿ ಬಳಸಿಕೊಂಡು, ಸುಮಾರು 45 ದಿನ ರಾಂಜಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಚೆನೈನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಯಶ್, ಫಿಟ್ನೆಸ್ ಸಿದ್ಧತೆ ಕುರಿತು ಮಾತನಾಡಿದ ರಾಂಜಿ ಶ್ರೀನಿವಾಸನ್, ‘ಯಾವುದೇ ಸಮಯದಲ್ಲಿ ಅತ್ಯುತ್ತಮ ಸಾಧನೆ ತೋರಲು ನಮ್ಮ ಸ್ಪರ್ಧಿಗಳು ಸಿದ್ಧರಿರುವಂತೆ ಮಾಡುತ್ತೇವೆ. ಯಶ್ ಇದನ್ನು ಕರಗತ ಮಾಡಿಕೊಂಡಿದ್ದಾರೆ. 4 ವರ್ಷದಿಂದ ಅವರು ನಮ್ಮ ಜತೆ ಇದ್ದಾರೆ. ಈ ಅವಧಿಯಲ್ಲಿ ಅವರು ಬಲ, ವೇಗ ಹಾಗೂ ಮಿಂಚಿನ ರಿಪ್ಲೆಕ್ಸ್, ಸ್ಥಿರತೆಗೆ ಗಮನ ಹರಿಸಿದ್ದರೆ. ಅಂತಹ ಬದ್ಧ, ಕಿರಿಯ ವಯಸ್ಸಿನಲ್ಲೇ ಪ್ರಬುದ್ಧತೆ ಹೊಂದಿರುವ, ಗುರಿಯ ಬಗ್ಗೆ ದೃಷ್ಟಿ ಹೊಂದಿರುವ ಸ್ಪರ್ಧಿ ಅಪರೂಪ. ಮುಂದಿನ ದಿನಗಳಲ್ಲಿ ಅವರು ಗಮನ ಸೆಳೆಯುತ್ತಾರೆ.

ರಾಷ್ಟ್ರದ ಕೆಲ ಶ್ರೇಷ್ಠ ತರಬೇತುದಾರರಿಂದ ಶಿಕ್ಷಣ ಪಡೆದಿರುವ ಯಶ್, ತಾವು ಭಾಗವಹಿಸಿದ ಪ್ರತಿ ಸ್ಪರ್ಧೆಯಲ್ಲಿ ಛಾಪು ಮೂಡಿಸಿದ್ದಾರೆ. ಚಾಂಪಿಯನ್ ಪಟ್ಟ ಗೆಲ್ಲುವುದಕ್ಕಾಗಿ ತಾವಿರುವುದು ಎಂಬುದನ್ನು ಯಶ್ ಗುರುಗಳಿಗೆ ಹಾಗೂ ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಬೇಕಿದೆ. (ಎಸ್.ಎಚ್)

Leave a Reply

comments

Related Articles

error: